ಕಾಂಗ್ರೆಸ್ ಮದಿಗರ ಶಾಪದಿಂದ ಸರ್ವನಾಶ

Published on

ಹೊಸಪೇಟೆ: ಕಾಂಗ್ರೆಸ್‌ಗೆ ಮದಿಗರ ಶಾಪ ಹಿಡಿಯುತ್ತದೆ. ಪಕ್ಷ ಸರ್ವನಾಶ ಆಗುತ್ತದೆ. ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೆ ಕುರ್ಚಿ ಖಾಲಿ ಮಾಡಿ ಎಂದು ಮಾದಿಗ ದಂಡೋರ ಒಳ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಜಿ.ನರಸಪ್ಪ ಆಗ್ರಹಿಸಿದರು.

ಮಾದಿಗ ದಂಡೋರದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ 30 ವರ್ಷಗಳ ನಿರಂತರ ಹೋರಾಟದ ಪ್ರತಿಫಲವಾಗಿ ಕಳೆದ ಆ.01ರಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ವರ್ಗೀಕರಣವನ್ನು ಆಯಾ ರಾಜ್ಯಗಳು ಅಂಗೀಕರಿಸಿ ಜಾರಿಗೊಳಿಸಬಹುದು ಎಂದು ತೀರ್ಪ ನೀಡಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಳ ಮೀಸಲಾತಿಯನ್ನು ತೀರ್ಪು ಬಂದು ಎರಡು ತಿಂಗಳು ಕಳೆದರೂ ಮೀಸಲಾತಿ ಅಂಗೀಕರಿಸಿ ಜಾರಿಗೊಳಿಸಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಿದರೆ ವರುಣ ಕ್ಷೇತ್ರದಿಂದ ಪಾದಯಾತ್ರೆ ಮುಖಾಂತರ ವಿಧಾನಸೌಧವನ್ನು ಮುತ್ತಿಗೆ ಹಾಕಲಾಗುತ್ತದೆ. ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ನಮ್ಮ ಮಾದಿಗ ಸಮುದಾಯದ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಒಳಮೀಸಲಾತಿ ಹರಿಯಾಣ ರಾಜ್ಯದಲ್ಲಿ ಜಾರಿಯಾಗಿದೆ. ಆದರೆ, ಇಲ್ಲಿ ಸೂಪ್ರೀಂ ಕೋರ್ಟ್ ಆದೇಶ ನೀಡಿದರು ಮೀನಾಮೇಷ ಎಣಿಸುತ್ತಿದ್ದಾರೆ. ಈ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗಿಂತ ದೊಡ್ಡವರ. ಕಾಂಗ್ರೆಸ್ ಪಕ್ಷ ಮಾದಿಗರನ್ನು ಕೇವಲ ಓಟ್‌ಬ್ಯಾಂಕ್ ಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೂ. ಚಲುವಾದಿಗಳ ಪಕ್ಷವಾಗಿರುವ ಮಾದಿಗರನ್ನು ವಂಚಿಸುತ್ತಿದೆ. ಆದ್ದರಿಂದ ಮಾದಿಗರು ಬಿಜೆಪಿಪರ ನಿಂತಿದ್ದಾರೆ ಎಂದರು.

ಪ್ರಮುಖರಾದ ಕತ್ತಿ ವೆಂಕಟೇಶ, ವಿಜಯಕುಮಾರ್, ಎರ್ರಿಸ್ವಾಮಿ, ಶಷ್ಮುಗಾನಂದ, ಜಗನ್ನಾಥ, ಬಜಾರಿ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net