ಹೊಸಪೇಟೆ ನವೀಕೃತ ಡಿಸಿ ಕಚೇರಿ ಪರಿಶೀಲಿಸಿದ ಸಚಿವೆ

030222 Shashikala Jolle Visit New DC Office
ಹೊಸಪೇಟೆಯ ಡ್ಯಾಂ ರಸ್ತೆಯಲ್ಲಿನ ಟಿಎಸ್‌ಪಿ ಆವರಣದಲ್ಲಿ ನವೀಕರಣಗೊಳಿಸಿರುವ ಜಿಲ್ಲಾಧಿಕಾರಿ ಕಚೇರಿಗೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಭೇಟಿ ನೀಡಿದರು.
Published on

ಹೊಸಪೇಟೆ: ನಗರದ ಟಿಎಸ್‌ಪಿ ಆವರಣದಲ್ಲಿ ನವೀಕರಿಸಲಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಪಂ ಸಿಇಒ ಕಚೇರಿ ಕಾರ್ಯನಿರ್ವಹಿಸಲಿವೆ. ಇವುಗಳ ಜತೆಗೆ ಇನ್ನೂ ಕೆಲ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ವಿವರಿಸಿದರು. ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಎಸ್ಪಿ ಡಾ.ಕೆ.ಅರುಣ್, ಎಡಿಸಿ ಮಹೇಶಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net