ಆರ್ ಸಿಬಿ ವಿಜಯೋತ್ಸವಕ್ಕೆ ವಿಶೇಷ ಪೂಜೆ

Published on

ಹೊಸಪೇಟೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೇಟ್ ತಂಡದ ಫೈನಲ್ ಗೆಲುವಿಗಾಗಿ ಬಿಜೆಪಿ ಯುವ ಮೋರ್ಚಾದಿಂದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಐಪಿಎಲ್ ಪಂದ್ಯದಗಳ ಪೈಕಿ ಅತಿ ಹೆಚ್ಚು ಫ್ಯಾನ್ಸ್ಗಳನ್ನೊಂದಿರುವ ತಂಡ ಆರ್‌ಸಿಬಿ ಪಂದ್ಯ. ಕ್ರಿಕೇಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯತೆ ಹೊಂದಿದ ಏಕೈಕ ತಂಡ ಇಂತ ಗೆಲ್ಲುವುದನ್ನು ಇಡಿ ಜಗತ್ತು ಕಾಯುತ್ತಿದೆ. ಸಣ್ಣಕ್ಕಿ ವೀರಭದ್ರೇಶ್ವ ದೇಗುಲದಲ್ಲಿ 18 ತೆಂಗಿನ ಕಾಯಿಗಳನ್ನು ಹೊಡಿಯುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಯಿತು ಎಂದರು.

ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಸಾಲಿ ಸಿದ್ದಯ್ಯ, ನಗರ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಚಂದ್ರು ದೇವಲಾಪುರ, ಮಧುರಚೆನ್ನಶಾಸ್ತ್ರಿ, ಜಯಶ್ರೀ, ವಿಜಯೇಂದ್ರ, ಬಸವರಾಜ್ ಗೌಳಿ, ಅನುರಾಧ, ಉಮಾದೇವಿ, ಲಲಿತಾ, ಬೋಜರಾಜ್, ಶಶಿಧರ್ ಸ್ವಾಮಿ, ಮಣಿಕಂಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net