ಏಳು ಟನ್ ಅಕ್ರಮ ಪಡಿತರ ಅಕ್ಕಿ ವಶ

06 MANJU 04
Published on

ಹೊಸಪೇಟೆ: ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಗುಡ್ಸ್ ವಾಹನವನ್ನು ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಡಬ್ಬಿನ್ ಮತ್ತು ತಂಡ ಮಂಗಳವಾರ ವಶಕ್ಕೆ ಪಡದು ಕ್ರಮಕೈಗೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬನ್ನಿಹಟ್ಟಿ ಡ್ರೈವರ್ ಬಸವರಾಜ ಪೊಲೀಸ್ ಪಾಟೀಲ್ (29) ಬಂಧಿತ ಆರೋಪಿ. ನಗರದ ಗೌಸ್ ಎಂಬ ಆರೋಪಿ ಸೇರಿದಂತೆ ಇತರೆ ಆರೋಪಿಗಳಿಗೆ ಪೊಲೀಸರು ಬಲೆ ಬಿಸಿದ್ದಾರೆ. ಕಮಲಾಪುರದ ಕುಪ್ಪಯ್ಯ ಕ್ಯಾಂಪ್ ನಲ್ಲಿ ಸರ್ಕಾರದಿಂದ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಟಾಟಾ ಗೂಡ್ಸ್ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ವೇಳೆ ಪೊಲೀಸರು ನಿಖರ ಮಾಹಿತಿಯೊಂದಿಗೆ ದಾಳಿ ನಡೆದಿದ್ದಾರೆ. ಬಂಧಿತರಿಂದ 1.92 ಲಕ್ಷ ರೂ. ಬೆಲೆ ಬಾಳುವ 7410 ಕೆಜಿ ಪಡಿತರ ಅಕ್ಕಿ ಮತ್ತು ಅಂದಾಜು 5 ಲಕ್ಷ ರೂ ಬೆಲೆಯ ಟಾಟಾ ಗೂಡ್ಸ್‌ ವಾಹನ ಜಪ್ತಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ  ಮಹಾಂತೇಶ, ಗುರುಬಸವರಾಜ, ವಿವೇಕನಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net