ಸಂಭ್ರಮದ ಶ್ರೀ ಯನ್ನಪ್ಪ ತಾತ ನವರ ರಥೋತ್ಸವ

Rathotsava
ಹೊಸಪೇಟೆಯ ಚಿತ್ತವಾಡ್ಗಿ ವರಕೇರಿಯ ಶ್ರೀ ಸದ್ಗುರು ಶ್ರೀ ಎಣ್ಣೇರಂಗ ಬಸವೇಶ್ವರ ದೇವಸ್ಥಾನದ ಶ್ರೀ ಯನ್ನಪ್ಪ ತಾತ ನವರ ರಥೋತ್ಸವ ಜರುಗಿತು.
Published on

ಹೊಸಪೇಟೆ: ಮಹಾ ಶಿವರಾತ್ರಿ ನಿಮಿತ್ತ ನಗರದ ಚಿತ್ತವಾಡ್ಗಿ ವರಕೇರಿ ಪ್ರದೇಶದಲ್ಲಿ ಇಂದು ಬೆಳಗ್ಗೆ ಶ್ರೀ ಸದ್ಗುರು ಶ್ರೀ ಎಣ್ಣೇರಂಗ ಬಸವೇಶ್ವರ ದೇವಸ್ಥಾನದ ಶ್ರೀ ಯನ್ನಪ್ಪ ತಾತ ನವರ ರಥೋತ್ಸವ ಜರುಗಿತು.

ಈ ರಥೋತ್ಸವದಲ್ಲಿ ಸ್ಥಳೀಯರು, ಆಂದ್ರಪ್ರದೇಶ ಅನಂತಪುರ ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಜನರ ಭಕ್ತರು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು, ರಥೋತ್ಸವ ದೇವಸ್ಥಾನದಿಂದ ರಥ ಬೀದಿಯ ಬಸವಣ್ಣ ದೇಗುಲದ ವರೆಗೆ ಸಾಗಿತು.
ಮಹಾ ಶಿವರಾತ್ರಿ ಪ್ರಯುಕ್ತ ಶುಕ್ರವಾರದಿಂದ ಇಂದು ಬೆಳಗಿನ ಜಾವದ ವರೆಗೆ ಮಠದ ಆವರಣದಲ್ಲಿ ಶಿವನ ಆರಾಧನೆ, ಭಜನೆ ಕಾರ್ಯಕ್ರಮಗಳು ನಡೆದವು.

ದೇವಸ್ಥಾನ ಆಡಳಿತ ಮಂಡಳಿಯ ಹೋನ್ನೂರಪ್ಪ, ಈಶ್ವರಪ್ಪ, ಕಾಶಿನಾಥ್, ಎಂ.ಬಸವರಾಜ, ನಿಂಬಗಲ್ ರಾಮಕೃಷ್ಣ, ದಾನಪ್ಪ, ಹೊಸೂರಪ್ಪ, ಕಳವಳ್ಳಿ ಹೋನ್ನೂರಪ್ಪ, ಕೆ.ಎಲ್. ಆಚಾರಿ ಹುಲುಗಪ್ಪ, ಸಂಕ್ಲಾಪುರ ಫಕ್ಕೀರಪ್ಪ, ಮಾಲ್ವಿ ನಾಗರಾಜ, ನಿಂಬಗಲ್ ರಘು, ಆನಂದ , ಜಿ.ಪಾಂಡುರಂಗ,ಎಚ್.ರಂಗಪ್ಪ, ಸಿ.ಉಮೇಶ, ಎನ್. ಸುರೇಶ್, ಗಂಗಾಧರ, ಯಲ್ಲಪ್ಪ, ರಾಜಶೇಖರ, ಗೋವಿಂದ, ಪರ್ತಪ್ಪ, ಅಂಬಣ್ಣ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net