ಅದ್ದೂರಿಯಾಗಿ ರಥಮ್ಮದೇವಿ ಆಚರಣೆ

news
ಹೊಸಪೇಟೆಯಲ್ಲಿ ಮಂಗಳವಾರ ಗ್ರಾಮದೇವತೆ ಊರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ದೇವಿಯನ್ನು ರಥಮ್ಮನನ್ನಾಗಿಸಿ ಭವ್ಯ ಮೆರವಣಿಗೆ ನಡೆಸಿದರು.
Published on

ಹೊಸಪೇಟೆ: ಊರಿನ ಸುಭಿಕ್ಷೆಗಾಗಿ 11 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ದೇವಿಯನ್ನು ರಥಮ್ಮನನ್ನಾಗಿಸಿ ಮಂಗಳವಾರ ಭವ್ಯ ಮೆರವಣಿಗೆ ನಡೆಸಿದರು.

ಗ್ರಾಮ ದೇವತೆ ಊರಮ್ಮದೇವಿ ಜಿರ್ಣೋದ್ಧಾರ ಅಭಿವೃದ್ಧಿ ಸಮಿತಿ ವತಿಯಿಂದ ತಾಲೂಕಿನ ರಾಜಾಪುರ ಗ್ರಾಮದಿಂದ ಆರಂಭಗೊAಡ ರಥಮ್ಮ ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಅನಂತಶಯನಗುಡಿ ಗ್ರಾಮದವರೆಗೆ ನಡೆಯಿತು. ಆ ಬಳಿಕ ಅನಂತಶಯನ ಗುಡಿ, ಕೊಂಡನಾಯಕನಹಳ್ಳಿ ಹಾಗೂ ಹಳೇ ಮಲಪನಗುಡಿ, ಹೊಸ ಮಲಪನಗುಡಿ ಗ್ರಾಮದ ಮೂಲಕ ಗಾಳೆಮ್ಮನ ದೇವಸ್ಥಾನಕ್ಕೆ ತೆರಳಿ ಸಂಪನ್ನವಾಯಿತು.

ಒಣಗಿದ ಅತ್ತಿ ಮರದಲ್ಲಿ ಗ್ರಾಮ ದೇವತೆ ಊರಮ್ಮನ ಮೂರ್ತಿಯನ್ನು ಕೆತ್ತನೆ ಮಾಡಿ ಅದಕ್ಕೆ ನಾಲ್ಕು ಗಾಲಿಗಳನ್ನು ಜೋಡಿಸಿ, ರಥವನ್ನಾಗಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಥಮ್ಮ ಮೆರವಣಿಗೆ ಎಂದು ಭಕ್ತರು ಕರೆಯುತ್ತಾರೆ. ಒಂದೇ ದಿನದಲ್ಲಿ ಅತ್ತಿ ಮರದಲ್ಲಿ ಊರಮ್ಮ ದೇವಿಯ ಸುಂದರ ಮೂರ್ತಿಯನ್ನು ಕೆತ್ತನೆ ಮಾಡಿ ಅದಕ್ಕೆ ಬಣ್ಣ ಹಚ್ಚಿ ಸುಂದರ ವಿಗ್ರಹವನ್ನಾಗಿ ರೂಪಿಸುತ್ತಾರೆ. ಇದಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಗ್ರಾಮದ ಗುರು, ಹಿರಿಯರು ಹಾಗೂ ಮುತ್ತೆöÊದೆಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net