ಅತ್ಯಾಚಾರಿ ಶಿಕ್ಷಕನಿಗೆ ಆರೋಪಿಗೆ ಗಲ್ಲು ಶಿಕ್ಷೆ ನೀಡಿ

05 MANJU 05
Published on

ಹೊಸಪೇಟೆ: ಕಲಬುರ್ಗಿಯಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ನಡೆಸಿದ ಮುಖ್ಯಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್‌ನ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬುಧವಾರ ಮನವಿ ರವಾನಿಸಲಾಯಿತು.

ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಬಂಜಾರ ಸಮಾಜದ ಅಪ್ರಾಪ್ತ ಬಾಲಕಿ ಮೇಲೆ ಶಾಲೆಯ ಮುಖ್ಯ ಶಿಕ್ಷಕ ಹಾಜಿಮಲಂಗ್ ಎಂಬವನು ಅತ್ಯಾಚಾರ ನಡೆಸಿದ್ದಾನೆ. ಇಂತಹ ಹೇಯ ಕೃತ್ಯ ನಡೆಸಿದ ದ್ರೋಹಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಮತ್ತು ಸಂತ್ರಸ್ತ ಬಾಲಕಿಯ ಕುಟುಂಬಸ್ಥರಿಗೆ ಸೂಕ್ತ ನ್ಯಾಯವನ್ನು ಒದಗಿಸಬೇಕು. ಸಂತ್ರಸ್ತ ಬಾಲಕಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಬಂಜಾರ ಸಮಾಜದ ಧರ್ಮ ಗುರು ಶ್ರೀ ತಿಪ್ಪೇಶ್ವರ ಸ್ವಾಮಿ, ಮಳಾವ್‌ನ ಜಿಲ್ಲಾಧ್ಯಕ್ಷ ಎಲ್.ಹನುಮನಾಯ್ಕ, ಕಾರ್ಯಾಧ್ಯಕ್ಷ ಗೋವಿಂದ ನಾಯ್ಕ, ಬಂಜಾರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಡಿ.ಶಿಲ್ಪಾ, ಪ್ರಮುಖರಾದÀ ಪಾಂಡು ನಾಯ್ಕ, ಸಂತೋಷ್ ನಾಯ್ಕ, ನೇತ್ರ ಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net