

ಹೊಸಪೇಟೆ: ಕಿತ್ತೂರು ರಾಣಿ ಚನ್ನಮ್ಮ ಮೊದಲ ಸ್ವಾತಂತ್ರ ಹೋರಾಟಗಾರ್ತಿ. ಹಾಗಾಗಿ ಪ್ರತಿಯೊಬ್ಬರು ರಾಣಿ ಚನ್ನಮ್ಮಳಂತಹ ಧೈರ್ಯ, ಶಕ್ತಿ ಬೆಳೆಸಿಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕದ ರಾಜ್ಯಾಧ್ಯಕ್ಷ ಕಿಚಿಡಿ ಕೊಟ್ರೇಶ್ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮಳ 201 ನೇ ವಿಜಯೋತ್ಸವ ಅಂಗವಾಗಿ ನಗರದ ಡ್ಯಾಂ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವತ್ತದಲ್ಲಿನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸೊಕ್ಕಿನಿಂದ ಮೆರೆಯುತಿದ್ದ ಬ್ರಿಟೀಷರಿಗೆ ಸೋಲಿನ ರುಚಿ ತೋರಿಸಿದ ವೀರ ರಾಣಿ ಚನ್ನಮ್ಮಳ ಸಾಧನೆ ಶ್ಲಾಘನೀಯ. ಅವರಂತೆ ಈ ನೆಲದಲ್ಲಿ ಸಹಸ್ರಾರು ಮಹಿಳೆಯರು ಹುಟ್ಟಿಬರಬೇಕು. ಮಹಿಳೆಯರು ಚನ್ನಮ್ಮಳ ದಿಟ್ಟತನ, ಸ್ವಾಭಿಮಾನ, ಹೋರಾಟದ ಛಲವನ್ನು ರೂಪಿಸಿಕೊಳ್ಳಬೇಕು ಎಂದರು.
ಪ್ರಮುಖರಾದ ಗೊಗ್ಗ ಚನ್ನಬಸವರಾಜ್, ಕೆ.ರವಿಶಂಕರ್, ಶರಣುಸ್ವಾಮಿ, ನೀಲಕಂಠನಗೌಡ, ಗೌಳಿ ರುದ್ರಪ್ಪ, ಎಲ್.ಬಸವರಾಜ್, ಮಧುರಚನ್ನಶಾಸ್ತ್ರೀ, ಅಶ್ವಿನ್ ಕೊತ್ತಂಬರಿ, ಡಾ.ಮಹಬಲೇಶ್ವರ ರೆಡ್ಡಿ, ಮೆಟ್ರಿ ಮಲ್ಲಿಕಾರ್ಜುನ ಇತರರಿದ್ದರು.