ಗೊಂದಳಿ ರಾಮಪ್ಪಗೆ ಸುವರ್ಣ ಮಹೋತ್ಸವ ಪ್ರಶಸ್ತಿ

30 MANJU 08
Published on

ಹೊಸಪೇಟೆ: ಕನ್ನಡ ರಾಜ್ಯೋತ್ಸವ ನಿಮಿತ್ತ ರಾಜ್ಯ ಸರ್ಕಾರ ನೀಡುತ್ತಿರುವ ಕರ್ನಾಟಕ ಸಂಭ್ರಮ 50 ನಿಮಿತ್ತ  ನೀಡುವ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದ ಜಾನಪದ ಕಲಾವಿದ ಗೊಂದಳಿ ರಾಮಪ್ಪ ಭಾಜನರಾಗಿದ್ದಾರೆ.

ಓದಿದ್ದು ಕೇವಲ ಎರಡನೇ ತರಗತಿ ಮಾತ್ರ. ಜೀವ ಸಾಧನಕ್ಕೆ ಆಯ್ಕೆ ಮಾಡಿದ್ದು ಜಾನಪದ ಕಲೆ. ಇವರ ಕಲೆಗೆ ರಾಜ್ಯ ಸರ್ಕಾರದಿಂದ ನೀಡುವ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದ ಜಾನಪದ ಕಲಾವಿದ ಗೊಂದಳಿ ರಾಮಪ್ಪ ಭಾಜನರಾಗಿದ್ದಾರೆ.

ಕಳೆದ 45 ವರ್ಷಗಳಿಂದ ಕಲಾಸೇವೆಯನ್ನು ರಾಜ್ಯ ಸರ್ಕಾರ ಗುರಿತಿಸಿ ದಾರವಾಡ ಹಾಗೂ ಹೊಸಪೇಟೆ ಆಕಾಶವಾಣಿ, ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಳ್ವಾಸ್ ನುಡಿಸಿರಿ ಅಖಿಲ ಭಾರತ 62 ನೇ ಕನ್ನಡ ಸಾಹಿತ್ಯ ಸಮ್ಮಳನ, ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕ ಸೇರಿದಂತೆ ಇತರೆ ಕಡೆ ತಮ್ಮ ಜಾನಪದ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರ ಕಲೆಯನ್ನು ಗುರುತಿಸಿ ಜಾನಪದ ಲೋಕೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ, ಜಾನಪದ ಲೋಕಸಿರಿ ಪ್ರಶಸ್ತಿ ಸೇರಿದಂತೆ ಇತರೆ ಪ್ರಶಸ್ತಿಗಳು ಲಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net