ಶ್ರೀರಾಮುಲು ಕಾಂಗ್ರೆಸ್ಗೆ ಬರೋದೇ ಇಲ್ಲರಿ ಸ್ವಾಮಿ

ZAMIR
Published on

ಹೊಸಪೇಟೆ: ಮಾಜಿ ಸಚಿವ ಬಿ.ಶ್ರೀರಾಮಲು ಕಾಂಗ್ರೆಸ್ ಸೇರುವುದು ಊಹಾ ಪೋಹದ ಸುದ್ದಿಗಳು ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲುದು ಒಳಜಗಳ ಅದು. ಶ್ರೀರಾಮುಲು ಕಾಂಗ್ರೆಸ್‌ಗೆ ಬರುವುದ ಮಾತು ಸುಳ್ಳು. ಅವರು ಕಾಂಗ್ರೆಸ್ ಪಕ್ಷಕ್ಕೆ ಬರೋದೇ ಇಲ್ಲಾರಿ ಸ್ವಾಮಿ, ಯಾಕೆ ಬರ್ತಾರೆ ಹೇಳಿ ನೋಡೋಣ? ಅವರ ಬಗ್ಗೆ ನನಗೆ ಗೊತ್ತಿದೆ. ಅವರು ಹೇಗೆ ಎಂಬುದು. ಅದು ಊಹಾ ಪೋಹದ ಸುದ್ದಿಗಳು ಎಂದರು.

ಡಿಕೆಶಿಯವರು, ಜಾರಕಿಹೊಳಿ ತುಳಿಯೋಕೆ ಶ್ರೀರಾಮುಲುನ ಕರ್ಕೊಂಡು ಬರ್ತಾರೆ ಅನ್ನೋ ವಿಚಾರಕ್ಕೆ ಉತ್ತರಿಸಿದ್ದ ಸಚಿವ ಜಮೀರ್, ಬಿಜೆಪಿಯವರು ಬೆಳೆ ಬೆಯಿಸಿಕೊಳ್ಳಲು ಅವರು ಏನು ಬೇಕಾದರೂ ಮಾತನಾಡ್ತಾರೆ. ಆಥರ ಏನೇನೂ ನಮ್ಮ ಪಕ್ಷದಲ್ಲಿ ಇಲ್ಲಾ. ಸತೀಶ್ ಜಾರಕಿಹೊಳಿ ನಮ್ಮ ಪಕ್ಷದ ನಾಯಕರು. ಸದ್ಯ ಸಿಎಂ ಖುರ್ಚಿನೂ ಖಾಲಿ ಇಲ್ಲಾ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕೂಡ ಖಾಲಿ ಇಲ್ಲ. ಸಿಎಂ ಸಿದ್ದರಾಮಯ್ಯ ಇದ್ದಾರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿಕೆ. ಶಿವಕುಮಾರ್ ಇದ್ದಾರೆ. ಈ ಸ್ಥಾನಗಳನ್ನು ಬದಲಾವಣೆ ಮಾಡಬೇಕು ಎಂದರೆ, ನಮ್ಮ ಹೈ ಕಮಾಂಡ್ ಮಾಡಬೇಕು. ನಾವು ನಮ್ಮ ಅಭಿಪ್ರಾಯ ಹೇಳಬಹುದು ಅಷ್ಟೆ ಎಂದರು.

ಬಿಜೆಪಿಯವರು ಕನಸಿನ ಮನೆ ಕಟ್ಟಿದ್ದಾರೆ ಅಷ್ಟೆ. ಕಾಂಗ್ರೆಸ್ ಬಡವರಿಗೆ ಮನೆಗಳನ್ನು ಕಟ್ಟಿಸಿ ನನಸು ಮಾಡಿದೆ. ಹೊಸ ಯೋಜನೆಗಳನ್ನು ಕೂಟ ರೂಪಿಸಲಾಗಿದೆ. ವಿಜಯನಗರಕ್ಕೆ ಮೆಡಿಕಲ್ ಕಾಲೇಜು ಸೇರಿದಂತೆ ನೂತನ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಅನುದಾನ ಮುಂದಿನ ಬಜೇಟ್‌ನಲ್ಲಿ ಸಿಗಲಿದೆ. ಇಲ್ಲಿನ ಪ್ರಮುಖ ಬೇಡಿಕೆಯಾದ ಸಕ್ಕರೆ ಕಾರ್ಖಾನೆ ಸಮಸ್ಯೆ ಆದಷ್ಟು ಬೇಗ ಪರಿಹರಿಸಲಾಗುತ್ತದೆ ಎಂದರು.

ಕಳೆದ ಬಾರಿ ಹಂಪಿ ಉತ್ಸವಕ್ಕೆ 16 ಕೋಟಿ ರೂ. ಅನುದಾನ ಬಂದಿತ್ತು. ಈ ಬಾರಿ ಇನ್ನೂ ಎರಡು ಕೋಟಿ ರೂ. ಹೆಚ್ಚಾಗಿ ಬರಬಹುದು. ಈ ಈ ಬಾರಿ ಕಳೆದಬಾರಿಗಿಂದ ಇನ್ನೂ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net