

ಹೊಸಪೇಟೆ: ನಟ ವಿಷ್ಣುವರ್ಧನ್ ಅಭಿನಯದ ನಾಗಹಾವು ಸಿನಿಮದ ಕತೆ ಮುಗಿದಿದೆ. ಆನಂತರದ ಕತೆಯೇ ಈ ಚಾಮಯ್ಯ ಸನ್ಆಫ್ ರಾಮಾಚಾರಿ ಚಲನಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಚಿತ್ರದ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದರು. ಸೆ.18ರಂದು ವಿಷ್ಣುವರ್ಧನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಜ್ಯಾಧ್ಯಾಂತ ಚಾಮಯ್ಯ ಸನ್ಆಫ್ ರಾಮಾಚಾರಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾ ಯುವಜನರಿಗೆ ಹೊಸ ಸಂದೇಶ ರವಾನೆಯಾಗಲಿದೆ. ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 25ರಿಂದ 30 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ನಾಗರಹಾವು ಸಿನಿಮಾದಲ್ಲಿ ನಾಯಕ ಹಾಗೂ ನಾಯಕಿ ಎತ್ತರದಿಂದ ಬಿದ್ದನಂತರ ಚಿತ್ರವನ್ನು ಮುಗಿಸಲಾಗಿದೆ. ಆದರೆ, ಆನಂತರ ಕಥೆ ಬರೆಯಲಾಗಿದೆ. ಬಳಿಕ ವಿಷ್ಣುವರ್ಧನ್ ಅವರ ಅನುಮತಿ ಕೂಡ ಪಡೆದಿದ್ದೆ. ಕೆಲವೇ ದಿನಗಳಲ್ಲಿ ಅವರು ನಿಧನ ಹೊಂದಿದರು. ಬಳಿಕ ಮಧ್ಯದಲ್ಲಿ ಕೆಲಕಾಲ ಕೆಲಸ ನಿಂತು ಹೋಯಿತು. ಆನಂತರ ಪುನಃ ಆರಂಭಿಸಿ ಈಗ ವೀಕ್ಷಕರೆದುರು ಬಂದಿದ್ದೇವೆ. 2022ರಲ್ಲಿ ಚಿತ್ರದುರ್ಗದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಸಹಸ್ರಾರು ಜನರ ನಡುವೆ ಈ ಚಿತ್ರದ ಚಿತ್ರೀಕರಣ ನಡೆಸಿದ್ದು ವಿಶೇಷ ನೆನಪು ಎಂದರು.
ಚಿತ್ರನಟ ರಾಜಣ್ಣ ಮಾತನಾಡಿ, ನಾನು ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿ. ಮೂಲತಃ ರಂಗಭೂಮಿ ಕಲಾವಿದ. ಅನೇಕ ನಾಟಕಗಳಲ್ಲಿ ಅಭಿನಯಿಸಿರುವೆ. ವಿಷ್ಣುವರ್ಧನ್ ಅವರಂತೆ ನಾನು ಬೆಳೆಯಬೇಕು. ಜ್ಯೂನಿಯರ್ ವಿಷ್ಣುವರ್ಧನ್ ಆಗಬೇಕೆಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದೆ. ಈ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರು.
ನಿರ್ಮಾಪಕ ಗೋವಿಂದರಾಜ್, ನಟರಾದ ಪ್ರೇಮಗೌಡ, ಎಸ್.ಎಸ್.ಚಂದ್ರಶೇಖರ್ ಇತರರಿದ್ದರು.