ವರನಟನ ಜೀವನ ಶೈಲಿ ಆದರ್ಶಪ್ರಾಯ

24 MANJU 01
Published on

ಹೊಸಪೇಟೆ: ನಾಡಿನ ನೆಲ, ಜಲ, ಕನ್ನಡ ಭಾಷೆ ಪರ ಮುಂಚೂಣಿ ವಹಿಸಿದ್ದ ಕನ್ನಡದ ಕಟ್ಟಾಳು ಡಾ.ರಾಜಕುಮಾರ ಜೀವನ ಶೈಲಿಯೇ ಆದರ್ಶಪ್ರಾಯವಾದದು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.

ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವರನಟ ಡಾ.ರಾಜಕುಮಾರ್‌ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿನಯವಂತಿಕೆಗೆ ರಾಜಕುಮಾರ್ ಮಾದರಿ ವ್ಯಕ್ತಿ, ವ್ಯಕ್ತಿತ್ವವಾಗಿದ್ದರು. ರಾಜ್ಯದ ಪ್ರಭಾವಿ ನಟನಾದರು ಚಿತ್ರರಂಗದ ಕಲಾವಿದರೊಂದಿಗೆ ಸಮಾನವಾಗಿ ಬೆರೆಯುತ್ತಿದ್ದದು ಸ್ಮರಣೀಯ. ಕರ್ನಾಟಕ ಕಲಾವಿದರ ಸಂಘ ಸ್ಥಾಪಿಸಿ ಕಲಾವಿದರ ಶ್ರೇಯೋಭಿವೃದ್ಧಿ ಬಯಸಿದ್ದರು. ಅಭಿಮಾನಿಗಳನ್ನು ದೇವರು ಎಂದು ಸರಳತೆ ಮೆರೆದ ಚಿತ್ರರಂದ ಧೃವತಾರೆಯಾಗಿದ್ದರು. ಅವರ ಎಲ್ಲಾ ಸಿನಿಮಾಗಳು ಸಾಮಾಜಿಕ ಪರಿವರ್ತನೆಗೆ ಪೂರಕವಾದ ಚಿತ್ರಗಳಾಗಿವೆ. ಅವರ ಜೀವನ ಶೈಲಿ, ಸರಳತೆ, ವಿನಯವಂತಿಕೆ ಇಂದಿನ ಯುವಕರು ಅಳವಡಿಸಿಕೊಳ್ಳಬೇಕಿದೆ. ರಾಜ್ಯಕ್ಕೆ, ರಾಷ್ಟçಕ್ಕೆ ಉನ್ನತ ಕೀರ್ತಿ ನೀಡಿದ ಶ್ರೇಯಸ್ಸು ಡಾ.ರಾಜಕುಮಾರ್ ಸಲ್ಲಬೇಕಿದೆ. ಅಂತರಾಷ್ಟಿçÃಯ ಮಟ್ಟದಲ್ಲಿ ಡಾ.ರಾಜಕುಮಾರ್ ಒಬ್ಬ ಶ್ರೇಷ್ಟ ನಟ ಗುರುತಿಸಿಕೊಂಡಿರುವುದು ಅಪ್ರತಿಮ ಸಾಧನೆಯಾಗಿದೆ. ದೇಶದ ಅನೇಕ ಮಹನೀಯರ ಹೆಸರಿನಲ್ಲಿ ಪಾತ್ರಗಳಿಗೆ ಜೀವ ತುಂಬಿ ಅವರ ವ್ಯಕ್ತಿತ್ವವನ್ನು ಅಜರಾಮರಗೊಳಿಸಿದ ಅಮರ ನಟ ಡಾ.ರಾಜಕುಮಾರ್ ಆಗಿದ್ದಾರೆ. ಇವರ ಜನ್ಮದಿನವನ್ನ ಎಲ್ಲರೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಡಾ.ರಾಜ್‌ರನ್ನು ಸ್ಮರಿಸುವ ಕಾರ್ಯವಾಗಬೇಕಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿ ಶಿರೇಸ್ತೆದಾರ ಸ್ನೇಹಲತಾ, ಪ್ರಿಯದರ್ಶಿನಿ, ಶರಣಪ್ಪ ಹಳ್ಳಿಕೇರಿ, ವಾರ್ತಾ ಇಲಾಖೆ ಸ್ಥಾನಿಕಾಧಿಕಾರಿಗಳಾದ ರಾಮಾಂಜನೇಯ, ಅಶೋಕ್ ಉಪ್ಪಾರ, ತಾಯೇಶ್, ಕಿಶೋರ್, ತಿಪ್ಪೇಶ್, ದೇವರಾಜ್, ಪಿ.ಕೃಷ್ಣಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net