

ಹೊಸಪೇಟೆ: ನಗರ ಸೇರಿ ವಿವಿಧೆಡೆ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ. ನಗರದ ರೈಲು ನಿಲ್ದಾಣದ ಛಾವಣಿ ಸೋರುತ್ತಿದೆ. ಇದರಿಂದ ಫ್ಲಾಟ್‌ಫಾರ್ಮ್‌ನಲ್ಲಿ ನೀರು ನಿಂತಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ನಿಲ್ದಾಣದ ಒಳಗಡೆ ಇರುವ ಆಸನಗಳು, ಮೆಟ್ಟಿಲುಗಳ ಕೆಳಗೆ ಮಳೆ ನೀರು ಹರಿದಿದ್ದರಿಂದ ಸಮಸ್ಯೆಯಾಗಿದೆ. ಮಳೆ ಬಂದಾಗ ಪ್ರಯಾಣಿಕರು ನೆನೆಯುತ್ತಲೇ ಓಡಾಡಬೇಕಾಗಿದೆ. ಹಲವು ಬಾರಿ ದೂರು ನೀಡಿದರೂ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಪ್ರಯಾಣಿಕರ ಆರೋಪವಾಗಿದೆ.
ರೈಲು ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆದಿದೆ. ಆದರೆ, ಮಳೆ ನೀರು ಸೋರಿಕೆಗೆ ಕಾರಣ ತಿಳಿದಿಲ್ಲ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
| ಬಿ.ಯಲ್ಲಪ್ಪ ಸ್ಟೇಷನ್ ಮಾಸ್ಟರ್, ರೈಲು ನಿಲ್ದಾಣ ಹೊಸಪೇಟೆ