ಭಾರಿ ಮಳೆ-ಗಾಳಿಗೆ ಬಾಳೆ ರೈತರ ತತ್ತರ

news
ಹೊಸಪೇಟೆಯ ಹೊಸೂರು ಗ್ರಾಮದ ರಾಂಪುರ ದುರ್ಗಪ್ಪ ಎಂಬ ರೈತನ ಕೃಷಿ ಭೂಮಿಯಲ್ಲಿ ಬಾಳೆ ನೆಲಕಚ್ಚಿರುವುದು.
Published on

ಹೊಸಪೇಟೆ: ಹೊಸಪೇಟೆ ಹಾಗೂ ಕಮಲಾಪುರ ಹೋಬಳಿಯಲ್ಲಿ ಶನಿವಾರ ರಾತ್ರಿ ಸುರಿದ ಗುಡುಗು, ಸಿಡಿಲು ಮಿಶ್ರಿತ ಭಾರಿ ಗಾಳಿ-ಮಳೆಗೆ 230 ಎಕರೆಗೂ ಆಧಿಕ ಬಾಳೆ ಹಾಗೂ ಭತ್ತ ಬೆಳೆಗೆ ನೆಲಕಚ್ಚಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.

ಹೊಸೂರು 126, ಚಿತ್ತವಾಡ್ಗಿ 34.33, ನರಸಾಪುರ 20.15, ಕಳ್ಳಿರಾಂಪುರ 8.96, ಬೆಳಗೋಡು 7, 88 ಮುದ್ಲಾಪುರ 2.70, ನಾಗೇನಹಳ್ಳಿ 1.64 ಎಕರೆ ಸೇರಿದಂತೆ ಒಟ್ಟು 200.78 ಸೆಂಟ್ಸ್ ಎಕರೆ ಬಾಳೆ ಹಾನಿಗೊಳಗಾಗಿದೆ. ನಿಂಬಾಪುರ 25 ಎಕರೆ ಸೇರಿಂತೆ ಕಡೆ ಬಾಳೆ ನೆಲಕ್ಕುರುಳಿದೆ. ಒಟ್ಟು 200 ಕ್ಕೂ ರೈತರಿಗೆ ಲಕ್ಷಾಂತರ ರೂ. ಹಾನಿಯಾಗಿದೆ. ಶಾಸಕ ಎಚ್.ಆರ್.ಗವಿಯಪ್ಪ ವಿವಿಧ ಕಡೆ ಪರಿಶೀಲನೆ ನಡೆಸಿದರು.

ಈ ಬಾರಿ ಭೀಕರ ಬರಗಾಲಕ್ಕೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ತಳ ಸೇರಿದೆ. ಇದರ ನಡುವೆಯೂ ಪುರಾತನ ವಿಜಯನಗರ ಕಾಲುವೆಗಳ ಝರಿ ನೀರಿನಲ್ಲಿ ಸುಗಂಧಿ, ಏಲಕ್ಷಿ ಹಾಗೂ ಸಕ್ಕರೆ ಬಾಳೆಯನ್ನು ಬೆಳೆದಿದ್ದರು. ಇನ್ನೊಂದು ತಿಂಗಳಲ್ಲಿ ಬಾಳೆಯನ್ನು ಕಟಾವ್ ಮಾಡಿ, ಕೈತುಂಬಾ ಹಣ ನೋಡಬೇಕೆಂದು ಕಾದು ಕುಳಿತಿದ್ದ ರೈತರಿಗೆ ಕೈ ಬಂದ ತುತ್ತು ಬಾಯಿಗೆ ಬಂದAತಾಗಿದೆ.

ಮುರಿದು ವಿದ್ಯುತ್ ಕಂಬಗಳು

ಭಾರಿ ಮಳೆ ಗಾಳಿಗೆ 15 ಕ್ಕೂ ಎಚ್ಚು ವಿದ್ಯುತ್ ಕಂಬಗಳು ಉರುಳಿವೆ. ನಗರದ ನೂರು ಹಾಸಿಗೆ ಆಸ್ಪತ್ರೆ ಬಳಿ 3, ಚಪ್ಪರದಳ್ಳಿ 2, ಚಿತ್ತವಾಡ್ಗಿ 2, ಸಂಕ್ಲಾಪುರ, ವಿನಾಯಕ ನಗರ, ಎಂ.ಜೆ.ನಗರ, ನಾಗಪ್ಪನ ಕಟ್ಟೆ ಬಳಿ ಸೇರಿದಂತೆ ಇತರೆ ಕಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ತಡರಾತ್ರಿಯಿಂದ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರು ಭಾನುವಾರ ಮಧ್ಯಾನ್ಹ ವರೆಗೆ ಪರದಾಡಿದರು.

ಮನೆ ಹಾನಿ

ಹೊಸೂರು ಗ್ರಾಮದ ಎರಬಯಲು ಮಾಗಣಿ ಪ್ರದೇಶದಲ್ಲಿ ಒಂದು ಕಚ್ಚಾ ಮನೆ, 8 ಕಚ್ಚಾ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ಎಂ.ಜೆ.ನಗರ 3 ಕ್ರಾಸ್‌ನಲ್ಲಿ ಮನೆಯ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net