ರೈಲ್ವೆ ಬೇಡಿಕೆ ಈಡೇರಿಕೆಗೆ ಪತ್ರ

news
ಬಾಬುಲಾಲ್ ಜೈನ್
Published on

ಹೊಸಪೇಟೆ: ರೈಲ್ವೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನೂತನ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ರಾಷ್ಟಿçÃಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಲಾಲ್ ಜೈನ್ ಪತ್ರ ಬರೆದಿದ್ದಾರೆ

ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳು ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಿದೆ. ರೈಲು ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ನೈಋತ್ಯ ರೈಲ್ವೇ ವಲಯಕ್ಕೆ ಅತ್ಯಧಿಕ ಆದಾಯವಿದ್ದರೂ, ಈ ಭಾಗದ ಜನರ ನಿರೀಕ್ಷೆಗೆ ತಕ್ಕಂತೆ ಸೌಲಭ್ಯಗಳು ದೊರೆಯುತ್ತಿಲ್ಲ. ಬೆಳಗಾವಿ-ಹೊಸಪೇಟೆ-ಹೈದರಾಬಾದ್-ಭದ್ರಾಚಲಂ ರೈಲು ಕಳೆದ 3 ವರ್ಷಗಳಿಂದ ಸಂಚರಿಸುತಿತ್ತು. ಕಳೆದ 2 ತಿಂಗಳಿAದ ರದ್ದುಪಡಿಸಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಹೈದರಾಬಾದ್ ಮತ್ತು ತೆಲಂಗಾಣದ ಕಡೆಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ.

ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಗದಗ್, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದ ಪ್ರಸಿದ್ದ ಯಾತ್ರಾಸ್ಥಳ ಮಂತ್ರಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ರೈಲು ಸಂಪರ್ಕ ಇಲ್ಲದಂತಾಗಿದೆ. ಆದ್ದರಿಂದ ರೈಲನ್ನು ಪುನರ್ ಆರಂಭಿಸಿ ಖಾಯಂ ಸಂಚರಿಬೇಕು. ವಿಶ್ವಪಾರಂಪರಿಕ ತಾಣ ಹಂಪಿ ಹಾಗೂ ಹಲವು ವರ್ಷಗಳಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿಗೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಬೆಂಗಳೂರು-ಹೊಸಪೇಟೆ ನಡುವೆ ಒಂದೇ ಭಾರತ್ ರೈಲು ಆರಂಭಿಸಿದರೆ ಈ ಭಾಗದಲ್ಲಿ ಪ್ರವಾಸೋದ್ಯಮ ಹಾಗೂ ಆರ್ಥಿಕ ಚಟುವಟಿಕೆಗಳು ಬೆಳವಣಿಗೆಯಾಗುತ್ತವೆ.

ಈ ಹಿಂದೆ ಹುಬ್ಬಳ್ಳಿಯಿಂದ ಗುಂತಕಲ್ ನಡುವೆ ಸಂಚರಿಸುತ್ತಿದ್ದ ರೈಲು ಪ್ರಸ್ತುತ ತೋರಣಗಲ್ ವರೆಗೆ ಮಾತ್ರ ಸಂಚರಿಸುತ್ತಿದೆ. ಇದರಿಂದ ಪ್ರತಿನಿತ್ಯ ಈ ಭಾಗದಿಂದ ವೈದ್ಯಕೀಯ ಚಿಕಿತ್ಸೆ, ಶಾಲಾ ಕಾಲೇಜುಗಳು, ವ್ಯಾಪಾರ ವಹಿವಾಟಿಗೆ ಬಳ್ಳಾರಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ, ಆದುದರಿಂದ ಈ ರೈಲನ್ನು ಮೊದಲಿನಂತೆ ಗುಂತಕಲ್ ವರೆಗೆ ವಿಸ್ತರಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net