ರೈಲ್ವೆ ಬೇಡಿಕೆಗೆ ಸಚಿವ ಸೋಮಣ್ಣಗೆ ಮನವಿ

12 MANJU 01
Published on

ಹೊಸಪೇಟೆ: ವಿವಿಧ ಬೇಡಿಕೆಗಳಿಗೆ ವಿಜಯನಗರ ರೈಲ್ವೇ ಬಳಕೆದಾರರ ಸಂಘದಿAದ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಶುಕ್ರವಾರ ರಾತ್ರಿ ಮನವಿ ಸಲ್ಲಿಸಲಾಯಿತು.

ನಗರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಿಲಾಗಿದೆ. ಪ್ರವಾಸೋದ್ಯಮ, ನೀರಾವರಿ, ಕೈಗಾರಿಕೆಗಳಿಗೆ ಕೇಂದ್ರ ಸ್ಥಾನವಾಗಿದೆ. ನಗರದಿಂದ ಹಾದು ಹೋಗುವ ರೈಲ್ವೇ ಮಾರ್ಗದ ಕೆಲವು ಕಡೇ ಮೇಲು ಸೇತುವೆ ಅಗತ್ಯವಾಗಿದೆ. ಹೆಚ್ಚಾಗುತ್ತಿರುವ ವಾಹನಗಳ ಸುಗಮ ಸಂಚಾರ ಮತ್ತು ಎಲ್ಲಾರ ಸುರಕ್ಷತಾ ದೃಷ್ಟಿಯಿಂದ ಮೇಲುಸೇತುವೆ ನಿರ್ಮಿಸುವ ಅಗತ್ಯವಿದೆ. ಎಲ್.ಸಿ.ಗೇಟ್ ನಂ.10, 04, 83 ಮೇಲ್ಸೇತುವೆ ನಿರ್ಮಾಣ ಆಗಬೇಕಿದೆ. ಇನ್ನೂ ಅನಂತಶಯನಗುಡಿ ರೈಲ್ವೇ ಮೇಲ್‌ಸೇತುವೆ ನಿರ್ಮಾಣ ಮಂದಗತಿಯಲ್ಲಿ ಸಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸೇತುವೆ ಎರಡು ಬದಿಯಲ್ಲಿ ಮನೆ ಕಳೆದು ಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.

ವಿಶೇಷ ರೈಲುಗಳಿಗೆ ಹೆಚ್ಚುವರಿ ಟಿಕೇಟ್ ದರ ಇರುವ ವಿಜಯಪುರ - ಯಶವಂತಪುರ ರೈಲನ್ನು ಖಾಯಂ ಗೊಳಿಸಿ ಪ್ರಯಾಣ ದರ ಇಳಿಸಬೇಕು. ಉತ್ತರ ಕರ್ನಾಟಕ ಜಿಲ್ಲೆಗಳಿಂದ ಮಂತ್ರಾಲಯ ಹೈದ್ರಾಬಾದ್ ಕಡೆಗೆ ಹೋಗುವ ಪ್ರಯಾಣಿಕರ ಸಂಚಾರ ರದ್ದಾಗಿರುವ ಬೆಳಗಾವಿ-ಮನಗುರು ಪುನರಾರಂಬಿಸಬೇಕು. ಹೊಸಪೇಟೆ-ತುಮಕೂರು ನಡುವೆ ನೂತನ ರೈಲು ಪ್ರಾರಂಭಿಸಬೇಕು. ಬೆಳಿಗ್ಗೆ 6ಕ್ಕೆ ಗಂಟೆಗೆ ಹೊರಡುವ ಹಾಗೂ ತುಮಕೂರಿನಿಂದ ಹೊಸಪೇಟೆಗೆ ರಾತ್ರಿ ಹಿಂದಿರುಗುವ ನೂತನ ರೈಲಿನ ಅವಶ್ಯಕತೆ ಇದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಭರಮನಗೌಡ್ರು, ವೈ.ಯಮುನೇಶ್, ಮಹೇಶ್ ಕುಡುತಿನಿ, ಅರವಿಂದ ಜಾಲಿ, ದೀಪಕ್ ಉಳ್ಳಿ, ವಿಶ್ವನಾಥ ಕೌತಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net