ರೈಲ್ವೆ ಬೇಡಿಕೆಗೆ ಮನವಿ

22 MANJU 05
Published on

ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿಯಿಂದ ನಗರದಲ್ಲಿ ಶನಿವಾರ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರಣ್ ಮಾಥೂರ್‌ಗೆ ಮನವಿ ಸಲ್ಲಿಸಿದರು.

ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಬಾಬುಲಾಲ್ ಜೈನ್ ಮಾತನಾಡಿ, ಮಹಾಕುಂಬ ಮೇಳದ ನಿಮಿತ್ತ ರದ್ದಾಗಿರುವ ಗಾಡಿ ಸಂಖ್ಯೆ : 07335/07336 ಬೆಳಗಾವಿ-ಹೊಸಪೇಟೆ-ಹೈದರಾಬಾದ್-ಮಣುಗೂರು ರೈಲನ್ನು ಕೂಡಲೇ ಪುನರ್ ಆರಂಬಿಸಬೇಕು. ಮೂರು ವರ್ಷಗಳ ಹಿಂದೆ ಜಾರಿಗೆ ತರಲಾಗಿರುವ ಸ್ಲೀಪರ್ ಕ್ಲಾಸ್ ಪಾಲಿಸಿ ನಿಯಮದಡಿಯಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ ಪಡೆದು ಆಯ್ದ ರೈಲಿನಲ್ಲಿ ಹೊಸಪೇಟೆಯಿಂದ ಹುಬ್ಬಳ್ಳಿಗೆ ಮತ್ತು ಅಲ್ಲಿಂದ ಮರಳುವುದಕ್ಕೆ ಸ್ಲೀಪರ್ ಕೋಚ್‌ಗಳಲ್ಲಿ ಪ್ರಯಾಣಿಸುವ ಸೌಲಭ್ಯ ಜಾರಿಯಲ್ಲಿದ್ದರು, ಹಂಪಿ ಎಕ್ಸ್ಪ್ರೇಸ್ ಹಾಗೂ ಅಮರಾವತಿ ಎಕ್ಸ್ಪ್ರೇಸ್ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತಿಲ್ಲ. ಅಲ್ಲದೇ ದಂಡವಸೂಲಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಪರಿಷ್ಕೃತ ಆದೇಶ ಜಾರಿಗೊಳಿಸಿ ಟಿಕೆಟ್ ಪರಿವೀಕ್ಷಕರಿಗೆ ನಿಯಮಪಾಲಿಸಲು ಸೂಚನೆ ನೀಡಬೇಕು. ಪ್ರವಾಸೋದ್ಯಮ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಯ ದೃಷ್ಟಿಯಿಂದ ಕೊಟ್ಟೂರು ಮಾರ್ಗವಾಗಿ ಹೊಸಪೇಟೆಯಿಂದ ಬಂದರು ನಗರಿ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು. ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಎರಡು ನೂತನ ಪ್ಲಾಟ್ ಫಾರಂಗಳ ನಿರ್ಮಾಣ ಹಾಗೂ ರೈಲ್ವೇ ನಿಲ್ದಾಣದ ಆಧುನೀಕರಣ ಕಾರ್ಯಗತಗೊಳಿಸಬೇಕು. ವಾರಕ್ಕೆ ಎರಡು ಬಾರಿ ಸಂಚರಿಸುತ್ತಿರುವ ಹುಬ್ಬಳ್ಳಿ ಚೆನ್ನೆöÊ ರೈಲನ್ನು ಪ್ರತಿದಿನ ಸಂಚರಿಸುವAತೆ ಕ್ರಮ ಕೈಗೊಳ್ಳಬೇಕು. ಮೈಸೂರು-ಶಿರಡಿ-ಮೈಸೂರು ರೈಲನ್ನು ವಾರಕ್ಕೆ ಮೂರು ಬಾರಿ ಸಂಚರಿಸಲು ಕ್ರಮ ಕೈಗೊಳ್ಳಬೇಕು. ಹೊಸಪೇಟೆ-ಮುಂಬೈ ರೈಲಿನ ಹಳೇ ಕೋಚ್‌ಗಳ ಬದಲಾಗಿ ಅತ್ಯಾಧುನಿಕ ಎಲ್.ಎಚ್.ಬಿ. ಕೋಚ್‌ಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಪುಕ್‌ರಾಜ್ ಚೋಪ್ರಾ, ಪ್ರಭಾಕರ್, ಮಹೇಶ್ ಕುಡುತಿನಿ, ರಾಮಕೃಷ್ಣ, ಪ್ರೋ.ಉಮಾಮಹೇಶ್ವರ, ನಜೀರ್ ಸಾಬ್, ವಿಶ್ವನಾಥ ಕೌತಾಳ್, ಅಶೋಕ್ ಜೈನ್, ಜಬ್ಬರ್ ರಾಜ್ ಪುರೋಹಿತ್, ವರುಣ್.ಜೆ, ರಂಗನಾಥ, ರಮೇಶ ಲಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net