ಗುರುಸಾರ್ವಭೌಮರ ಉತ್ತರಾಧನೆ ಸಂಪನ್ನ

22 MANJU 07
Published on

ಹೊಸಪೇಟೆ: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಉತ್ತರಾಧನೆ ನಿಮಿತ್ತ ನಗರ ಸೇರಿದಂತೆ ಜಿಲ್ಲಾದ್ಯಂತ ಶ್ರೀಮಠಗಳಲ್ಲಿ ಮಹಾರಥೋತ್ಸವ ಜರುಗಿತು.

ನಗರದ ರಾಣಿಪೇಟೆ ನಂಜನಗೂಡು ಶ್ರೀರಾಗವೇಂದ್ರ ಮಠ, ಗಾಂಧಿಕಾಲೋನಿ, ಕಮಲಾಪುರ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಶಾಖಾ ಮಠಗಳಲ್ಲಿ ಬೆಳಿಗ್ಗೆ ವಿಶೇಷವಾಗಿ ಫಲಪಂಚಾಮೃತಾಭಿಷೇಕ, ರಾಯರ ಬೃಂದಾವನಗಳಿಗೆ ರಜತ, ರೇಷ್ಮೆ ಹಾಗೂ ವಿಶೇಷ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಉತ್ಸವ ಮೂರ್ತಿಗೆ ಕನಕಾಭಿಷೇಕ, ಸರ್ವಸೇವೆ, ಮಹಾಪೂಜೆ ಬಳಿಕ ಹಸ್ತೋದಕ, ನೇವೈದ್ಯ, ಮಹಾಮಂಗಳರಾತಿ ಜರುಗಿತು. ಉತ್ತರಾಧನೆ ಪ್ರಯುಕ್ತ ಮಹಾರಥೋತ್ಸವ ನಡೆಯಿತು. ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರು ನೃತ್ಯ ಗೀತೆಗಳೊಂದಿಗೆ ವಿಶೇಷ ಭಕ್ತಿ ಅರ್ಪಿಸಿದರು. ಶ್ರೀಮಠದ ಆವರಣದಲ್ಲಿ ಸಾಮೂಹಿಕ ಭಜನೆ, ಅಷ್ಟೋತ್ತರ ಪಾರಾಯಣ, ಕೋಲಾಟ, ನೃತ್ಯ ಪ್ರದರ್ಶನ ನಡೆಯಿತು. ಶ್ರೀಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಶಾಖಾ ವ್ಯವಸ್ಥಾಪಕರಾದ ಕೃಷ್ಣಮೂರ್ತಿ, ಟೀಕಾಚಾರ್ಯ ಗುಂಜಳ್ಳಿ, ಅನಂತ ಪದ್ಮನಾಭ, ವಿಜಯ್ ಕುಮಾರ್, ಶಿರೆಕೊಳ್ಳ ಗುರುರಾಜ್ ಇತರರಿದ್ದರು.

ಇನ್ನೂ ನಗರದ ವಿಜಯಾ ಚಿತ್ರಮಂದಿರ ಬಳಿಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಬೃಂದಾವನಕ್ಕೆ ಬೆಳಿಗ್ಗೆ ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ, ಅರ್ಚನೆ, ಕನಕಾಭಿಷೇಕ, ಸರ್ವಸೇವೆ ನಡೆಯಿತು. ಪುಷ್ಪಾರ್ಚನೆ, ಹಸ್ತೋದಕ ಮಹಾಮಂಗಳರಾತಿ ಜರುಗಿತು. ಪವನ ಹೋಮ ಜರುಗಿತು. ಶ್ರೀಮಠದ ಆವರಣದಲ್ಲಿ ರಥೋತ್ಸವ ನಡೆಯಿತು. ಮಠಾಧಿಕಾರಿ ಭೀಮಸೇನಾರ್ಚಾ, ಪವಾನಾರ್ಚ, ಪ್ರಹ್ಲಾದಾಚಾರ್ಯ, ಅನಿಲಾಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net