ಮುಂದುವರಿದ ಜನಾಂಗಕ್ಕೆ 2ಎಗೆ ಸೇರಿಸದಿರಿ

16 MANju 01
Published on

ಹೊಸಪೇಟೆ: ಸಾಮಾಜಿಕ, ಶೈಕ್ಷಣಿಕ, ಜಾತಿವಾರು ಜನಗಣತಿ ವರದಿಯನ್ನು ಬಿಡುಗಡೆಗೊಳಿಸಿ ಅನುಷ್ಠಾನಗೊಳಿಸುವಂತೆ ಮತ್ತು ಯಾವುದೇ ಮುಂದುವರಿದ ಜನಾಂಗದವರಿಗೆ ಪ್ರವರ್ಗ 2ಎ ನಲ್ಲಿ ಸೇರ್ಪಡೆ ಮಾಡಬಾರದು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ 2002ರಲ್ಲಿ ಹಿಂದುಳಿದ ವರ್ಗಗಳ ಒಂದು ಪಟ್ಟಿಯನ್ನು ಮಾಡಿ, ಆ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಜಾತಿವಾರು ಜನಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಬಿಡುಗಡೆಗೊಳಿಸಿಲ್ಲ. ಮುಂದುವರಿದ ಜನಾಂಗದವರೂ ಹಿಂದುಳಿದ ವರ್ಗದ ಮೀಸಲಾತಿ ಪಡೆಯಬೇಕು ಎಂದು ಸಂಚು ಮಾಡುತ್ತಿದ್ದಾರೆ. ಹೀಗಾಗಿ ಜಾತಿವಾರು ಜನಗಣತಿಯನ್ನು ಶೀಘ್ರ ಬಿಡುಗಡೆಗೊಳಿಸಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಕೆ.ರವಿಕುಮಾರ, ಎಂ.ನಾಗರಾಜ, ಬಂದಿ ಬರ್ಮಪ್ಪ, ಮಜ್ಜಿಗೆ ನಾಗರಾಜ್, ಕೆ.ಬಸವರಾಜ, ಮರಡಿ ಮಂಜುನಾಥ, ಕೆ.ರಮೇಶ, ಗೋವಿಂದಪ್ಪ, ಪಲ್ಲೇದ ಸಿದ್ದೇಶ್, ಎಂ.ಡಿ.ರಫೀಕ್, ಹೊನ್ನೂರಪ್ಪ, ಎಚ್.ಪರಶುರಾಮ, ಜಿ.ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net