

ಹೊಸಪೇಟೆ: ರಾಕೋಬವಿ ಹಾಲು ಒಕ್ಕೂಟದ ಕೇಂದ್ರ ಕಚೇರಿ ಬಳ್ಳಾರಿಯಿಂದ ಸ್ಥಳಾಂತರ ಹಾಗೂ ಮೇಘಾಡೈರಿ ನಿರ್ಮಾಣಕ್ಕಾಗಿ ನಗರದಲ್ಲಿ ಏ.17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಕೋಬವಿ ನಿರ್ದೇಶಕ ಎಚ್.ಮರುಳಸಿದ್ದಪ್ಪ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರಾಕೋಬವಿ ಹಾಲು ಒಕ್ಕೂಟಕ್ಕೆ ವಿಜಯನಗರ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ 4 ಜಿಲ್ಲೆಗಳಿವೆ. ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸಿಮಿತವಾಗಿದ್ದರೂ ಹೆಚ್ಚು ಕೊಡುಗೆ ವಿಜಯನಗರ ಜಿಲ್ಲೆಗೆ ಸೇರಿದೆ. ವಿಜಯನಗರದಲ್ಲಿ 360 ಸಹಕಾರ ಸಂಘಗಳು 1.20 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದೆ. ಕೊಪ್ಪಳ 270 ಸಂಘಗಳು 70 ಸಾವಿರ ಲೀಟರ್, ರಾಯಚೂರು 129 ಸಂಘಗಳಿಗೆ 30 ಸಾವಿರ ಲೀಟರ್, ಬಳ್ಳಾರಿ 69 ಸಂಘಗಳು 9 ಸಾವಿರ ಲೀಸರ್ ಹಾಲು ಉತ್ಪಾದನೆ ಮಾಡುತ್ತಿವೆ. ಸಹಕಾರಿ ಸಂಘಗಳು ಒಕ್ಕೂಟದ ಅರ್ಧಪಾಲು ಕೊಡುಗೆ ವಿಜಯನಗರಕ್ಕೆ ಸಲ್ಲಿಸುತ್ತಿದೆ. ನಿರ್ದೇಶಕರ ನೇಮಕ ಸೇರಿದಂತೆ ಇತರೆ ವಿಷಯಗಳಿಗೂ ಸಮಸ್ಯೆ ಆಗುತ್ತಿದೆ. ಹರಪನಹಳ್ಳಿ ಹಡಗಲಿ ಭಾಗದಿಂದ ಸಾಗಾಣೆ ವೆಚ್ಚ ಭರಿಸಲಾಗುತ್ತಿದೆ. ವಿಜಯನಗರಕ್ಕೆ ಮಾತ್ರವಲ್ಲ ಎಲ್ಲಾ ಜಿಲ್ಲೆಗೂ ಅನ್ಯಾಯ ಮಾಡುತ್ತಿದ್ದಾರೆ. ಆಡಳಿತ ಮಂಡಳಿಯ ಅವಧಿ ಅಂತ್ಯವಾದರೂ ಮುಂದುವರೆಯುವAತೆ ಮಾಡಿದ್ದು, ಯಾವುದೆ ಅಭಿವೃದ್ಧಿ ಕಾರ್ಯಕ್ಕೂ ಸಹಕಾರ ನೀಡದೆ ಅಸಹಕಾರ ನೀಡುತ್ತಿದೆ. ಕಳೆದ 35 ವರ್ಷಗಳಿಂದ ಆಗದ ಅಭಿವೃದ್ಧಿ ಸದ್ಯ ಎಲ್.ಬಿ.ಪಿ.ಭೀಮಾನಾಯ್ಕ್ ಅಭಿವೃದ್ಧಿ ಪಡಿಸಿದರು. ಇದರಿಂದ ಬಳ್ಳಾರಿ ಸದಸ್ಯರು ನಿರಂತರವಾಗಿ ತೊಂದರೆ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಹೊಸಪೇಟೆ ಚಲೊ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದರು
ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ್ ಕುಕ್ಕಪ್ಪಿ ಮಾತನಾಡಿ, ಕೇಂದ್ರ ಕಚೇರಿ ಬಳ್ಳಾರಿಯಲ್ಲಿದ್ದು ಆಡಳಿತ ಮಂಡಳಿಯ ಸಭೆ ಸಮಾರಂಭ ಸೇರಿದಂತೆ ಕಾನೂನು ಪಾಲನೆಯಲ್ಲಿನಿರಂತರ ತೊಡಕು ಉಂಟು ಮಾಟಾಗುತ್ತಿದೆ. ಬಳ್ಳಾರಿ ಸದಸ್ಯ ಹಾಗೂ ಸದಸ್ಯರಲ್ಲದವರ ಆಡಳಿತ ಮಂಡಳಿಯ ಸಭೆಗೂ ಅಡ್ಡಿಪಡಿಸುವ ಮೂಲಕ ತಮ್ಮ ದರ್ಪ ತೊರುತ್ತಿದ್ದಾರೆ ಎಂದು ಆಗ್ರಹಿಸಿದರು.
ಜಿಲ್ಲಾಧಕ್ಷ ವೆಂಕಟೇಶ, ಪ್ರಮುಖರಾದ ಜಿ.ಸೋಮಣ್ಣ, ಫಕೀರಪ್ಪ, ಉಷಾ, ಲಕ್ಷ್ಮಣ,ಕಾತೇಶಪ್ಪ, ಗೋಣಿ ಬಸಪ್ಪ ಇತರರು ಭಾಗವಹಿಸಿದರು.