ಜೇಮ್ಸ್ ಟೀಸರ್‌ಗೆ ವಿದೇಶಿಗರು ಫಿದಾ!

120222 Hospete JAMES Film Teaser Foreigners FIDA
ಹಂಪಿಯಲ್ಲಿ ಅಪ್ಪು ಅಭಿಮಾನಿಗಳು ಗುರುವಾರ ಏರ್ಪಡಿಸಿದ್ದ ಜೇಮ್ಸ್ ಟೀಸರ್ ವೀಕ್ಷಿಸಿ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿದರು.
Published on

ಹೊಸಪೇಟೆ: ಪುನೀತ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಧೂಳೆಬ್ಬಿಸಿರುವ ಬೆನ್ನಲ್ಲೇ ಇತ್ತ ಹಂಪಿ ಪ್ರವಾಸಕ್ಕೆ ಬಂದಿದ್ದ ವಿದೇಶಿಗರು ಕೂಡಾ ಟೀಸರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಆಗಮಿಸಿದ್ದ ಇಸ್ರೇಲ್ ದೇಶದ ಪ್ರವಾಸಿಗರು ಅಪ್ಪು ನಟನೆಯ ಜೇಮ್ಸ್ ಟೀಸರ್ ನೋಡಿ ಬೆರಗಾಗಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಬಳಿಕ ಟೀಸರ್ ಕುರಿತು ಪ್ರತಿಕ್ರಿಯಿಸಿ, ನಾವು ಇಸ್ರೇಲ್ ದೇಶದವರು, ಅಪ್ಪು ಬಗ್ಗೆ ಬಹಳಷ್ಟು ಕೇಳಿದ್ದೇವೆ. ಅವರು ತುಂಬಾ ಒಳ್ಳೆಯ ವ್ಯಕ್ತಿತ್ವವುಳ್ಳ ಮನುಷ್ಯ. ಅವರ ಅಭಿನಯದ ಸಿನಿಮಾ ನೋಡಿರಲಿಲ್ಲ. ಜೇಮ್ಸ್ ಚಿತ್ರದ ಟೀಸರ್ ಬಹಳ ಕುತೂಹಲಕಾರಿಯಾಗಿದೆ. ಅವರೊಬ್ಬ ಶ್ರೇಷ್ಠ ನಟ ಎಂಬುದು ತಿಳಿಯಿತು. ಇಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋಗಬಾರದಿತ್ತು. ವಿ ಮಿಸ್ ಯು ಅಪ್ಪು, ಆಲ್ ದಿ ಬೆಸ್ಟ್ ಫಾರ್ ದಿ ಮೂವಿ ಎಂದು ಶುಭ ಹಾರೈಸಿದ್ದಾರೆ.ಹೊಸಪೇಟೆಯ ಅಪ್ಪು ಅಭಿಮಾನಿ ಕಿಚಡಿ ವಿಶ್ವ ಹಾಗೂ ಸ್ನೇಹಿತರು ಹಂಪಿಯಲ್ಲಿ ಟೀಸರ್ ಪ್ರದರ್ಶನದ ವ್ಯವಸ್ಥೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net