ವಿಜಯನಗರ ವಿದ್ಯಾರ್ಥಿಗಳು ರಾಜ್ಯದ ಟಾಪ್ 10ರಲ್ಲಿ

Published on

ಹೊಸಪೇಟೆ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆಯ ವಿವಿಧ ಕಾಲೇಜಿನ ಕಲಾ ವಿಭಾಗದಲ್ಲಿ 9 ಹಾಗೂ ವಾಣಿಜ್ಯ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಶೇ.64.41 ಫಲಿತಾಂಶ ಬಂದಿದ್ದು, ಕಳೆದ ವರ್ಷಕ್ಕಿಂತ ಎರಡು ಸ್ಥಾನ ಮೇಲೆಕ್ಕೇರಿದೆ. ಇನ್ನೂ ತಾಲೂಕಿನ ಗುಂಡಾ ಸ್ಟೇಷನ್ ನಿವಾಸಿ ಲಾರಿ ಡ್ರೈವರ್ ರಾಮನಾಯ್ಕ ಮಗಳು ಸಂಜನಾ ಬಾಯಿ 597 ಅಂಕ ಗಳಿಸಿ ರಾಜ್ಯ ಮೊದಲ ಸ್ಥಾನ ಪಡೆದಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ಬಸ್ ಕಂಡಕ್ಟರ್ ಬಸವರಾಜ ಮಗಳು ನಿರ್ಮಲಾ.ಕೆ. ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನೂ ಕೂಡ್ಲಿಗಿಯ ಎಚ್.ಸುನಿತಾ 592 ಅಂಕ ಪಡೆದು ಆರನೇ ಸ್ಥಾನ ಪಡೆದಿದ್ದಾರೆ. ಕೊಟ್ಟೂರಿನ ಪ್ರಕೃತಿ.ಎನ್. 591 ಅಂಕ ಪಡೆದು 7ನೇ ಸ್ಥಾನ ಪಡೆದಿದ್ದಾರೆ. ಜಿ.ಲಾವಣ್ಯ, ಜಡೆಲಾಲಿ ಯಾದವ್, ಯಲ್ಲಮ್ಮ 590 ಅಂಕ ಪಡೆದು 8ನೇ ಸ್ಥಾನ ಗಳಿಸಿದ್ದಾರೆ. ಲಕ್ಷಿö್ಮÃ, ರಘುಪತಿ ಗೌಡ 588 ಅಂಕ ಪಡೆದು 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ವಾಣಿಜ್ಯ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ನಗರದ ಪೂರ್ವಿ ಜಿ.ಎನ್. 594 ಅಂಕ ಪಡೆದು ರಾಜ್ಯದಲ್ಲಿ 6ನೇ ಸ್ಥಾನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net