

ಹೊಸಪೇಟೆ: ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದ ಪಂಚಮಸಾಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ.ಕೆ. ಕಲಾ ವಿಭಾಗದಲ್ಲಿ 600ಕ್ಕೆ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಮೂಲತಹ ಗಂಗಾವತಿ ತಾಲೂಕಿನ ಜಂಗಮರಕಲ್ಗುಡಿ ಗ್ರಾಮದವರಾದ ಬಸವರಾಜ ಹಾಗೂ ಗಿರಿಜಮ್ಮ ದಂಪತಿಗಳ ಮೊದಲ ಮಗಳಾದ ನಿರ್ಮಲಾ.ಕೆ. ಸಾಧನೆ ಮಾಡಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ತಾಯಿಯ ತವರು ಮನೆಯ ಆಶ್ರಯ ಪಡೆದಿದ್ದಾರೆ. ಇಟ್ಟಿಗಿಯ ಶ್ರೀ ಪಂಚಮಸಾಲಿ ಪ.ಪೂ.ಕಾಲೇಜಿನಲ್ಲಿ ವಿದ್ಯಾಬ್ಯಾಸ ಪಡೆದು, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.