ಸಾಧನೆಗೆ ಸನ್ಮಾನದ ಭರಪುರ

09 MANJU 01
Published on

ಹೊಸಪೇಟೆ: ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ಗುಂಡು ಸ್ಟೇಷನ್ ನಿವಾಸಿ ಲಾರಿ ಡ್ರೈವರ್ ರಾಮನಾಯ್ಕ ಮಗಳು ಸಂಜನಾ ಬಾಯಿ ಕಲ ವಿಭಾಗದಲ್ಲಿ ರಾಜ್ಯ ಮೊದಲು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ಕಂಡಕ್ಟರ್ ಬಸವರಾಜ ಮಗಳು ನಿರ್ಮಲಾ.ಕೆ. ಎರಡನೇ ಸ್ಥಾನ ಪಡೆದ ಹಿನ್ನಲ್ಲೆಯಲ್ಲಿ ಜಿಲ್ಲಾಡಳಿತ ಸೇರಿದಂತೆ ಇತರೆ ಕಡೆಯಿಂದ ಶುಭಾಶಯ, ಸನ್ಮಾನದ ಭರಪುರವೇ ಹರಿದು ಬರುತ್ತಿದೆ.

ಫಲಿತಾಂಶ ಬರುತ್ತಿದ್ದತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪೋನ್ ಕರೆ ಮೂಲಕ ಶುಭಾಶಯ ಕೋರಿದ್ದಾರೆ. ಬುಧವಾರ ಕಚೇರಿಗೆ ಕರೆಸಿ ಸನ್ಮಾನಿಸಿದ್ದಾರೆ. ಇನ್ನೂ ಎಮ್ಮ ಕ್ಷೇತ್ರದ ಶಾಸಕ ನೇಮಿರಾಜ್‌ನಾಯ್ಕ, ಸಂಸದ ಈ.ತುಕಾರಾಂ ಕರೆಗಳ ಮೂಲ ಹಾರೈಸಿದ್ದಾರೆ. ಸಂಬAಧಿಕರು, ಸಮಾಜದ ನಾಯಕರು ಕೂಡ ವಿದ್ಯಾರ್ಥಿನಿಯರಿಗೆ ಕರೆಗಳ ಮೂಲಕ ಸಾಧನೆಯ ಶುಭ ಕೊರುತ್ತಿದ್ದಾರೆ. ತಮ್ಮ ಮಕ್ಕಳ ಸಾಧನೆಯನ್ನು ಸೇರಿದಂತೆ ಅವರ ಕತೆ ಈಗ ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಕ್ಕಳ ಯಶಸ್ಸು ಅವರ ಕನಸನ್ನು ಈಡೇರಿಸುವ ಸಲುವಾಗಿ ಪೋಷಕರು ತುಂಬಾ ಕಷ್ಟಪಡುತ್ತಾರೆ. ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಮಕ್ಕಳಿಗೆ ಒಂದು ಉತ್ತಮ ಬದುಕನ್ನು ರೂಪಿಸಲು ಹೆಣಗಾಡುತ್ತಾರೆ. ಅದೇ ವೇಳೆ ಮಕ್ಕಳು ಕೂಡ ತಮ್ಮ ಪೋಷಕರ ತ್ಯಾಗವನ್ನು ವ್ಯರ್ಥವಾಗಿಸದೇ ಕಷ್ಟಪಟ್ಟು ಜೀವನದಲ್ಲಿ ಗುರಿ ತಲುಪಿದರೆ ಪೋಷಕರ ತ್ಯಾಗಕ್ಕೊಂದು ಸಾರ್ಥಕತೆ ಬರುತ್ತದೆ. ನಮ್ಮ ಶ್ರಮವನ್ನು ಅವರು ವ್ಯರ್ಥಗೊಳಿಸಿಲ್ಲ. ನಮ್ಮ ತ್ಯಾಗಕ್ಕೊಂದು ಬೆಲೆ ನೀಡಿದರು ಎಂಬ ಧನ್ಯತಾ ಭಾವ ಅವರಲ್ಲಿ ಬರುತ್ತದೆ. ಪೋಷಕರು ಹೆಮ್ಮೆಯಿಂದ ನನ್ನ ಮಗ ಅಥವಾ ಮಗಳು ಈ ಸಾಧನೆ ಮಾಡಿದರು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುತ್ತಾರೆ. ಅದೇ ರೀತಿ ವಿಜಯನಗರ ಜಿಲ್ಲೆಯ ಗುಂಡ ಸ್ಟೇಷನ್ ನಿವಾಸಿ ಲಾರಿ ಚಾಲಕ ರಾಮನಾಯ್ಕ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕನ್ನಿಹಳ್ಳಿ ಗ್ರಾಮದ ಕಂಡಕ್ಟರ್ ಬಸವರಾಜ ಹಾಗೂ ಗಿರಿಜಮ್ಮ ದಂಪತಿಗಳು ತಮ್ಮ ಮಕ್ಕಳ ಸಾಧನೆ ನೋಡಿ ಗೆ ಹೆಮ್ಮೆಯಿಂದ ಹೇಳಿಕೊಂಳ್ಳುತ್ತಿದ್ದಾರೆ. ಫಲಿತಾಂಶ ನೋಡಿ ಮಕ್ಕಳ ಸಾಧನೆಯನ್ನು ಹೇಳಿಕೊಳ್ಳುವಾಗ ಅವರ ಮುಖದಲ್ಲಿ ಭಾರಿ ಹೆಮ್ಮೆ ಹಾಗೂ ಸಂತೋಷ ಕಾಣುತ್ತಿದೆ. ಮಕ್ಕಳಿದ್ದರೆ ಇಂತಹ ಮಕ್ಕಳಿರಬೇಕು ಎಂದು ಜನರ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net