

ಹೊಸಪೇಟೆ: ಪಿಯುಸಿ ವಿದ್ಯಾರ್ಥಿಗಳಿಗೆ ಗಣಿತಶಾಸ್ತç ವಿಷಯ ೨೪ನೇ ವರ್ಷಗಳಿಂದ ಉಚಿತವಾಗಿ ತರಬೇತಿ ನೀಡುತ್ತಿದ್ದು, ಡಿ.೨೨ರಿಂದ ಆರಂಭವಾಗಲಿದೆ ಎಂದು ಜವಳಿ ಕ್ಲಾಸಸ್ ನಿರ್ದೇಶಕ ಲೇಪಾಕ್ಷಿ ಎಸ್.ಜವಳಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜವಳಿ ಕ್ಲಾಸಸ್‌ನಿಂದ ಜವಳಿಸ್ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜಿನಲ್ಲಿ ಕಳೆದ ೨೩ ವರ್ಷಗಳಿಂದ ಪಿಯುಸಿ ಗಣಿತ ವಿಷಯದಲ್ಲಿ ಅನುತ್ತೀರ್ಣರಾಗಿ ಖಿನ್ನತೆಗೊಳಪಟ್ಟ, ಓದುವ ಆಸೆಯನ್ನು ಕಳೆದುಕೊಂಡ, ಆರ್ಥಿಕ ಇನ್ನಿತರ ಹಲವು ಸಮಸ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತ ಪೂರ್ವಭಾವಿ ತರಬೇತಿಯನ್ನು ನೀಡುತ್ತಾ ಬರಲಾಗಿದೆ. ಅದೇ ರೀತಿ ಈ ವರ್ಷವೂ ೨೦೨೫ರ ಜ.೧೪ರವರೆಗೆ ನಡೆಯಲಿರುವ ತರಬೇತಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಧಾರವಾಡದ ಹಿರಿಯ ಗಣಿತ ಉಪನ್ಯಾಸಕ ಶಿವಾನಂದ ಎಂ.ಪಾಟೀಲ್ ಅವರು, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ, ಆತಂಕ ತೆಗೆದು ಹಾಕಲು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ತರಬೇತಿ ನೀಡಲಿದ್ದಾರೆ. ಬೆಳಗ್ಗೆ ೮.೩೦ರಿಂದ ಸಂಜೆ ೪.೩೦ರವರೆಗೆ ತರಬೇತಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಾರಿಯೂ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದರು.