ಬೆಲೆ ಏರಿಕೆಯಲ್ಲಿ ಸತ್ತವರಿಗೂ ಮುಖ್ಯಮಂತ್ರಿ ಬಿಟ್ಟಿಲ್ಲ

Published on

ಹೊಸಪೇಟೆ: ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ತಹಸೀಲ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಐದು ಗ್ಯಾರಂಟಿ ನೀಡಿದ್ದಾರೆ. ಎಲ್ಲ ಗ್ಯಾರಂಟಿಗಳಿಗೂ ಕೊಕ್ಕೆ ಹಾಕಿ ಅದು ಜನರಿಗೆ ತಲುಪದಂತೆ ಮಾಡಿದ್ದಾರೆ. ವಿದ್ಯುತ್ ಬರೆ ಹಾಕಿದ್ದಾರೆ. ಜನನ ಮರಣ ಪ್ರಮಾಣ ಪತ್ರದ ಬೆಲೆ ಏರಿಕೆ ಮಾಡುವುದರ ಮೂಲಕ ಹುಟ್ಟಿದವರನ್ನು ಸತ್ತವರನ್ನು ಮುಖ್ಯಮಂತ್ರಿಗಳು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ಎಂದರೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಭ್ಯಾಸಗಿದೆ. ಕೇಂದ್ರ ಸರ್ಕಾರ ಯಾವುದೇ ಬೆಲೆ ಏರಿಕೆ ಮಾಡಿಲ್ಲ. ಅದು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿದೆ. ಅಲ್ಪಸಂಖ್ಯಾತರರಿಗೆ ಕಾಮಗಾರಿಯಲ್ಲಿ ಶೇ.4 ಮೀಸಲಾತಿ ನೀಡಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದ್ದಾರೆ. ಇದು ಸರಿಯಲ್ಲ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net