

ಹೊಸಪೇಟೆ: ನೂತನ ಪೋಸ್ಟಲ್ ಟೆಕ್ನಾಲಜಿ 2.0 ತಂತ್ರಜ್ಞಾನ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಬಳ್ಳಾರಿ ಅಂಚೆ ಅಧಿಕ್ಷ ಪದ್ಮಶಾಲಿ ಚಿದಾನಂದ ಹೇಳಿದರು.
ನಗರದ ನೆಹರು ಕಾಲೋನಿಯ ಉಪ ಅಂಚೆ ಕಚೇರಿಯಲ್ಲಿ ಗುರುವಾರ ನೂತನ ಪೋಸ್ಟಲ್ ಟೆಕ್ನಾಲಜಿ 2.0 ತಂತ್ರಜ್ಞಾನ ಉದ್ಘಾಟಿಸಿ ಮಾತನಾಡಿದರು.
ನೂತನ ತಂತ್ರಜ್ಞಾನ ಗ್ರಾಹಕ ಹಾಗೂ ನೌಕರರ ಸ್ನೇಹಿ ಆಗಿದೆ. ಪ್ರತಿ ಒಂದು ನೋಂದಾಯಿತ ಹಾಗೂ ತ್ವರಿತ ಅಂಚೆ ಮುಖಂತರ ಕಳಿಸಿದ ಪತ್ರಗಳ ಟ್ರಾಕ್ ಮಾಡಲಾಗುತ್ತದೆ. ಇದರಿಂದ ಯಾವ ಪ್ರದೇಶದಲ್ಲಿ ಇದೆ ಎಂದು ತಿಳುದುಕೊಳ್ಳಬಹುದು. ಈ ತಂತ್ರಜ್ಞಾನದಲ್ಲಿ ಡಿಜಿಟಲ್ ಪೇಮೆಂಟ್ ಮುಖಂತರ ಹಣ ಪಾವತಿ ಸಹ ಮಾಡಬಹುದು. ಗ್ರಾಹಕರು ಮನೆಯಲ್ಲಿ ಕುಳಿತು ಮೊಬೈಲ್‌ನಿಂದ ನೋಂದಾಯಿತ ಹಾಗೂ ತ್ವರಿತ ಅಂಚೆ ಸೇವೆಯನ್ನು ಪಡೆಯಬಹುದು ಎಂದರು.
ಸಹಾಯಕ ಅಂಚೆ ಅಧಿಕ್ಷಕ ರಾಜಪ್ಪ ಬಾರಿಕರ್ ಮಾತನಾಡಿ, ತಂತ್ರಜ್ಞಾನದಿAದ ಗ್ರಾಮೀಣ ಅಂಚೆ ಕಚೇರಿಗಳು ಸಹ ಸಂಪೂರ್ಣ ಗಣಕಿಕೃತದೊಂದಿಗೆ ಕೆಲಸ ಮಾಡಬಹುದು. ತ್ವರಿತ ಸೇವೆ ಪಡೆಯಬಹುದು ಎಂದರು.
ಅAಚೆ ಪಾಲಕ ಮರಾಠ ರಾಮರಾವ್, ಅಂಚೆ ಸಹಾಯಕರಾದ ವಿ.ಎಸ್.ಕೃಷ್ಣ, ಬಡಗಿ ಯರಿಸ್ವಾಮಿ, ಅಂಚೆ ಪೇದೆಗಳಾದ ಶಿಲ್ಪಾ, ಭಾವನಾ, ರಫೀಕ್ ಅಹಮದ್, ವಿರೂಪಾಕ್ಷಿ, ಮಂಜುನಾಥ ಇತರರಿದ್ದರು.
ಸಹಾಯಕ ಅಂಚೆ ಅಧಿಕ್ಷಕ ರಾಜಪ್ಪ ಬಾರಿಕರ್, ಅಂಚೆ ಪಾಲಕ ಮರಾಠ ರಾಮರಾವ್, ಅಂಚೆ ಸಹಾಯಕರಾದ ವಿ.ಎಸ್.ಕೃಷ್ಣ ಇತರರಿದ್ದರು.