ಪಿಂಚಣಿ ಅದಾಲತ್ ಜೂ.25ಕ್ಕೆ

Published on

ಹೊಸಪೇಟೆ: ಅಂಚೆ ಇಲಾಖೆಯಿಂದ ನಿವೃತ್ತರಾದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಇಲಾಖೆ ನೌಕರಿಕರಿಗಾಗಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ನಿವೃತ್ತ ಅಂಚೆ ನೌಕರರ ಕುಟುಂಬದವರಿಗಾಗಿ ಜೂ.25 ರ ಸಂಜೆ 4ಕ್ಕೆ ಬಳ್ಳಾರಿ ವಿಭಾಗೀಯ ಕಚೇರಿಯಲ್ಲಿ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ.

ಪಿಂಚಣಿದಾರರು ತಮ್ಮ ಕುಂದು ಕೊರತೆಗಳು ಇದ್ದಲ್ಲಿ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ವಿಭಾಗೀಯ ಕಾರ್ಯಾಲಯ ಕೋಟೆ ಬಳ್ಳಾರಿ ಅವರಿಗೆ ಜೂನ್.23 ರ ಮುಂಚಿತವಾಗಿ ತಲುಪುವಂತೆ ಪತ್ರ ಮುಖೇನ ಇಮೇಲ್ ಮೂಲಕ ಕಳುಹಿಸಿಕೊಡಬೇಕು. ತಮ್ಮ ಅಹವಾಲುನೊಂದಿಗೆ ಪಿಂಚಣಿ ಅದಾಲತ್‌ನಲ್ಲಿ ಹಾಜರಾಗಬೇಕು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net