

ಹೊಸಪೇಟೆ: ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಹಾಗೂ ಎಸ್ಪಿ ಈ ರೀತಿಯ ಕುಂದು ಕೊರತೆ ಸಭೆಯನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕರೆಯಬೇಕು. ಇದರಿಂದ ಸಮಾಜದ ಜಿಲ್ಲಾ ಮಟ್ಟದ ಸಮಸ್ಯೆಗಳ ಬಗ್ಗೆ ನೇರವಾಗಿ ಚರ್ಚಿಸಲು ಆಗುಬೇಕಿತ್ತು. ಆದರೆ ಈ ಸಮಯದಲ್ಲೂ ರಾಜಕೀಯ, ಅಧಿಕಾರಿಗಳ, ಇನ್ನಿತರ ಸಭೆಗಳು ನಡೆಯುತ್ತಲೇ ಇವೆ. ದಲಿತ ದೌರ್ಜನ್ಯ ಪ್ರಕರಣ ದಾಖಲಾದಾಗ ಜಿಲ್ಲಾಧಿಕಾರಿ ಹಾಗೂ ಎಪಿ ಸಂತ್ರಸ್ತರ ಮನೆಗೆ ಭೇಟಿ ನೀಡಬೇಕೆಂಬ ಕಾನೂನು ಪಲನೆ ಮಾಡಬೇಕು. ಕಂದಾಯ ಇಲಾಖೆಯಿಂದ ದಲಿತರ ಭೂಮಿ ವಿಚಾರವಾಗಿ ಬಹಳಷ್ಟು ಸಮಸ್ಯೆಗಳಿರುವುದರಿಂದ ಈ ಬಗ್ಗೆ ಚರ್ಚಿಸಲು ಆಗಾಗ ಜಿಲ್ಲಾ ಮಟ್ಟದ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದರು.
ಡಿವೈಎಸ್ಪಿಗಳಾದ ಟಿ.ಮಂಜುನಾಥ, ಮಲ್ಲೇಶ್ ದೊಡ್ಡಮನಿ, ಪಿಐಗಳಾದ ರಘುನಾಥ, ಪಕೀರಮ್ಮ, ಅಬಕಾರಿ ನಿರೀಕ್ಷಕಿ ಶೈನಜ್ ಬೇಗಮ್ ಇತರರಿದ್ದರು.