ವಾರಸುದಾರರಿಗೆ ಮೊಬೈಲ್ಗಳು ವಾಪಾಸ್

07 MANJU 06
Published on

ಹೊಸಪೇಟೆ: ಇಲ್ಲಿನ ಡಿವೈಎಸ್ಪಿ ಕಚೇರಿ ವ್ಯಾಪ್ತಿಯಲ್ಲಿನ ವಿವಿಧ ಪೊಲೀಸ್ ಠಾಣೆಯಲ್ಲಿ 20.74 ಲಕ್ಷ ರೂ. ಮೌಲ್ಯದ 123 ಮೊಬೈಲ್‌ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಪಟ್ಟಣ ಠಾಣೆಯಲ್ಲಿ 65, ಗ್ರಾಮೀಣ ಠಾಣೆ 29, ಚಿತ್ತವಾಡ್ಗಿ ಠಾಣೆ 6, ಕಮಲಾಪುರ ಠಾಣೆ 17, ಹಂಪಿ ಪ್ರವಾಸಿ ಠಾಣೆ 02, ಟಿಬಿಡ್ಯಾಂ ಠಾಣೆ 03 ಮತ್ತು ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಒಂದು ಮೊಬೈಲ್ ಕಳೆದು ಹೋಗಿತ್ತು. ಈ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಲಾಗಿದೆ. ಈ ಮೊಬೈಲ್‌ಗಳನ್ನು ಅಸ್ಸಾಂ, ಬಿಹಾರ, ಜಾರ್ಖಂಡ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ.ಮಂಜುನಾಥ, ಪಿಎಸ್‌ಐ ವಿರುಪಾಕ್ಷಪ್ಪ, ಪೆದೆ ಕುಮಾರ ನಾಯ್ಕ ಪತ್ತೆ ಮಾಡಿದ್ದಾರೆ ಎಂದರು.

ಮಾ.9ರAದು ಬೆಳಗ್ಗೆ 8 ಗಂಟೆಗೆ ನಗರದ ಟಿಬಿಡ್ಯಾಂನಿAದ ನಗರದ ಸಾಯಿಬಾಬಾ ವೃತ್ತದವರೆಗೆ ಐದು ಕಿ.ಮೀ. ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿದೆ. ಈ ಓಟದಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ನೌಕರರು ಹಾಗೂ ಸಾರ್ವಜನಿಕರು ಭಾಗ ವಹಿಸಲಿದ್ದಾರೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷ ವಾಕ್ಯದೊಂದಿಗೆ ವ್ಯಸನ ಮುಕ್ತ ರಾಜ್ಯ ಮತ್ತು ನಾಗರಿಕ ದೈಹಿಕ ಸದೃಢಕ್ಕಾಗಿ ಸದರಿ ಓಟವನ್ನು ಆಯೋಜಿಸಲಾಗಿದೆ ಎಂದರು.

ಆರೋಪಿ ಸೆರೆ

ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಜಾಲೇರ ಓಣಿಯಲ್ಲಿ ಕಳ್ಳತನ ಮಾಡಿದ ಆರೋಪದ ಮೇರೆಗೆ ಆರೋಪಿ ಓರ್ವನನ್ನು ಬಂಧಿಸಿದ್ದಾರೆ. ಬಂಧಿತನಿAದ 11.25 ಲಕ್ಷ ರು. ಬೆಳೆಬಾಳುವ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಬಂಧಿತನನ್ನು ಹುಬ್ಬಳ್ಳಿ ಕೇಶ್ವಾಪುರದ ನಿವಾಸಿ ಮಹಮದ್ ಅಲಿ ನಾಲಬಂದಿ ಎಂದು ಗುರುತಿಸಲಾಗಿದೆ. ನಗರದ ಜಾಲೇರ ಓಣಿಯ ಮನೆಯಲ್ಲಿ ಫೆ.25ರಂದು ಕಳ್ಳತನವಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net