ಚದರಿದ ರಾಜ್ಯಗಳನ್ನು ಒಗ್ಗಡಿಸಿದ ನಾಯಕ

31 MANJU 03
Published on

ಹೊಸಪೇಟೆ: ರಾಷ್ಟ್ರೀಯ ಏಕತಾ ದಿನಾಚರಣೆ ನಿಮಿತ್ತ ನಗರದಲ್ಲಿ ಗುರುವಾರ ಹೊಸಪೇಟೆ ಉಪ ವಿಭಾಗದ ಪೊಲೀಸರಿಂದ ರಾಷ್ಟ್ರೀಯ ಏಕತಾ ಓಟ ಕಾರ್ಯಕ್ರಮ ನಡೆಯಿತು.

ಎಎಸ್ಪಿ ಸಲೀಂ ಪಾಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅರಸರ ಕಾಲದಲ್ಲಿ ಸಣ್ಣ- ಸಣ್ಣ ಒಕ್ಕೂಟ ಮಾಡಿಕೊಂಡು ರಾಜ್ಯಭಾರದ ಮಾಡ್ತಿದ್ದರು. ಹೈದರಾಬಾದ್ ನಿಜಾಮರು ಸೇರಿದಂತೆ ಅನೇಕ ರಾಜರು ಇದ್ದರು. ಚದರಿದ ರಾಜ್ಯಗಳನ್ನು ಒಟ್ಟಿಗೆ ಸೇರಿಸಲು ಆ ಸಮಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಧೃಡ ನಿರ್ಧಾರ ಮಾಡಿದರು. ಭಾರತ ಮಾಡಿದ ಕೀರ್ತಿ ವಲ್ಲಭಭಾಯಿ ಪಟೇಲ್ ಅವರಿಗೆ ಸೇರುತ್ತದೆ. ಜನ್ಮದಿನವನ್ನು ರಾಷ್ಟ್ರೀಯ ಏಕತಾ ಒಕ್ಕೂಟ ಎಂದು ಕರೆಯಲಾಗುತ್ತದೆ. ಹೀಗಾಗಿ ನಾವು ಏಕತಾ ಓಟ ಅಂತ ಮಾಡ್ತಿದ್ದೇವೆ ಎಂದರು.

ಪಟ್ಟಣ ಪೊಲೀಸ್ ಠಾಣೆಯಿಂದ ಪುನೀತ್ ರಾಜ್‌ಕುಮಾರ್ ವೃತ್ತ, ಕಾಲೇಜು ರಸ್ತೆ ಸೇರಿದಂತೆ ನಗರದ ನಾನಾ ಕಡೆ ಏಕತಾ ಓಟ ನಡೆಯಿತು. ಡಿವೈಎಸ್ಪಿ ಮಂಜುನಾಥ್ ತಳವಾರ್, ಪಿಐಗಳಾದ ಲಖನ್ ಮಸುಗುಪ್ಪಿ, ಹುಲುಗಪ್ಪ, ಆಪಿಐ ಶಶಿಕುಮಾರ್, ಪಿಎಸ್‌ಐ ಸಂತೋಷ್ ಡಬ್ಬಿನ್, ಎಸ್ಪಿ ನಾಯ್ಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net