ಹೊಸಪೇಟೆಯಲ್ಲಿ ಪೊಲೀಸ್ ವೇಷದಲ್ಲಿ ಪಾದಚಾರಿಗೆ ವಂಚನೆ, 2.10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

Gold Theft
Published on

ಹೊಸಪೇಟೆ: ನಗರದಲ್ಲಿ ಭಾನುವಾರ ಸಿನಿಮೀಯವಾಗಿ ಪೊಲೀಸ್ ವೇಷದಲ್ಲಿ ಕಳ್ಳರ ತಂಡ, ವ್ಯಕ್ತಿಯೊಬ್ಬನಿಂದ 2.10 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ.

ಮೃತ್ಯುಂಜಯನಗರದ ಸಿದ್ದರಾಮಪ್ಪ ಮೋಸ ಹೋದವರು. ಭಾನುವಾರ ಸಿದ್ದರಾಮಪ್ಪ ಐದು ಉಂಗುರ, ಡಾಲರ್ ಸಹಿತ ಚಿನ್ನದ ಸರ ಹಾಕಿಕೊಂಡು ನಡೆದುಹೋಗುತ್ತಿದ್ದರು. ಈತನನ್ನು ನಕಲಿ ಪೊಲೀಸ್ ಬೈಕ್‌ನಲ್ಲಿ ಹಿಂಬಾಲಿಸಿದ್ದಾನೆ. ಬಳಿಕ ಸಿದ್ದರಾಮಪ್ಪ ಮುಂದೆ ಬಂದು ಬೈಕ್ ನಿಲ್ಲಿಸಿದ್ದಾನೆ. ಇದೇ ವೇಳೆ ಎದುರಿಗೆ ಬಂದ ವ್ಯಕ್ತಿಯನ್ನು ತಡೆದು ನಕಲಿ ಐಡಿ ಕಾರ್ಡ್ ತೋರಿಸಿ ನಗರದಲ್ಲಿ ಕಳ್ಳರಿದ್ದಾರೆ, ಮೈಮೇಲೆ ಬೆಲೆ ಬಾಳುವ ಚಿನ್ನಾಭರಣ ಹಾಕಿಕೊಂಡು ಓಡಾಡಬಾರದೆಂದು ಹೇಳಿ ಚಿನ್ನ ಪಡೆದು ಬಟ್ಟೆಯಲ್ಲಿ ಸುತ್ತಿ ಕೊಟ್ಟಿದ್ದಾನೆ. ಬಳಿಕ ಸಿದ್ದರಾಮಪ್ಪರನನ್ನು ಕೇಳಿದ್ದಾರೆ. ಪೊಲೀಸ್ ಎಂದು ನಂಬಿ ಚಿನ್ನಾಭರಣ ಹಾಗೂ ಮೊಬೈಲ್, ವಾಚ್ ಬಿಚ್ಚಿಕೊಟ್ಟಿದ್ದಾರೆ. ಸ್ವಲ್ಪ ಸಮಯದ ಬಳಿಕ ಬಟ್ಟೆ ಸುತ್ತಿ ಕೊಟ್ಟಿದ್ದು, 15 ನಿಮಿಷದಲ್ಲಿ ಮನೆಗೆ ಬರುತ್ತೇವೆ ಎಂದು ಅಲ್ಲಿಂದ ಕಳ್ಳರು ಕಾಲ್ಕಿತ್ತಿದ್ದಾರೆ.

ಸಿದ್ದರಾಮಪ್ಪ, ಮನೆಗೆ ಹೋಗಿ ನೋಡಿದಾಗ ಕೇವಲ ಮೊಬೈಲ್, ವಾಚ್ ಇದ್ದದ್ದನ್ನು ಕಂಡು ಸಿದ್ದರಾಮಪ್ಪ ಶಾಕ್ ಆಗಿದ್ದಾರೆ. ತಕ್ಷಣವೇ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ನಗರದಲ್ಲಿ ಐದು ಪೊಲೀಸ್ ಠಾಣೆಗಳಿದ್ದರೂ ಇಂಥ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net