ಪೂರ್ಣಗೊಳ್ಳದ ಯಾತ್ರಿನಿವಾಸ

Oplus_131072
Oplus_131072
Published on

ಹೊಸಪೇಟೆ: ತಾಲೂಕಿನ ಕಮಲಾಪುರದ ಕೆರೆತಾಂಡಾದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭಗೊAಡಿದ್ದ ಪ್ರವಾಸೋದ್ಯಮ ಇಲಾಖೆಯ ಯಾತ್ರಿನಿವಾಸ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಈಗ ಗಿಡಗಂಟಿಗಳು ಬೆಳೆದು ಪಾಳು ಬೀಳುಬಿದ್ದಿದೆ. ಇದಕ್ಕೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

೨೦೨೨ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ ಯಾತ್ರಿನಿವಾಸದ ಕಾಮಗಾರಿಗೆ ಬಿಜೆಪಿ ಸರ್ಕಾರದ ಅಂದಿನ ಸಚಿವ ಆನಂದ್ ಸಿಂಗ್ ಚಾಲನೆ ನೀಡಿದ್ದರು. ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಕಾಮಗಾರಿ ನಡೆದು, ಛಾವಣಿ ಮಟ್ಟಕ್ಕೆ ಬಂದಿದೆ. ನಾಲ್ಕು ವರ್ಷ ಕಳೆದರೂ ಪೂರ್ಣ ಗೊಳ್ಳದೇ ಹಾಗೆ ಇದೆ. ಗುತ್ತಿಗೆದಾರ ಕಾಮಗಾರಿ ಪೂರ್ಣ ಮಾಡದೇ ನಾಪತ್ತೆಯಾಗಿದ್ದಾರೆ. ಇನ್ನು ಯಾತ್ರಿನಿವಾಸದ ಸಹಿತ ಕಾಂಪೌAಡ್ ಕಾಮಗಾರಿ ಕೂಡ ವಿಳಂಬವಾಗುತ್ತಿದೆ. ಹಾವು, ಚೇಳು, ಕ್ರಿಮಿ, ಕೀಟಗಳ ವಾಸಸ್ಥಳವಾಗಿ ಮಾರ್ಪಟ್ಟಿದೆ. ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯರ ಆಗ್ರವಾಗಿದೆ.

ಯಾತ್ರಿನಿವಾಸ ಕಳೆದ ನಾಲ್ಕು ವರ್ಷದಿಂದ ಪೂರ್ಣ ಆಗುತ್ತಿಲ್ಲ. ಗಿಡ ಗಂಟೆ ಬೆಳೆದು ಪಾಳು ಬಿದ್ದಿದೆ. ಈ ಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳಿಗೆ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಒಡಾಡುವುದೇ ಕಷ್ಟವಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾಮಗಾರಿ ಪೂರ್ಣ ಮಾಡಿ ಅಥವ ಭೂತ ಬಂಗಲೆಯAತ ಯಾತ್ರಿನಿವಾಸವನ್ನು ತೆರವು ಮಾಡಿ. ಇಲ್ಲವೆಂದರೆ ಜೆಸಿಬಿ ಮೂಲಕ ನಾವೇ ತರವು ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಯಾತ್ರಿನಿವಾಸಕ್ಕೆ ೭೫ ಲಕ್ಷ ರೂ. ವೆಚ್ಚದ ಯೋಜನೆ ಹಾಕಲಾಗಿದೆ. ವಿಳಂಬ ಮಾಡದೇ ಬೇಗನೇ ಮುಗಿಸಬೇಕು ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಲಾಗಿದೆ. - ರವಿನಾಯ್ಕ, ಲೋಕೋಪಯೋಗಿ ಇಲಾಖೆ ಇಇ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net