

ಹೊಸಪೇಟೆ: ತಂತ್ರಜ್ಙಾನ ಯುಗದಲ್ಲಿ ಮೊಬೈಲ್ ಕ್ರಾಂತಿಯಿAದಾಗಿ ಮಾನವ ಸಂಬAಧಗಳು ಮಾಯವಾಗುತ್ತಿವೆ ಎಂದು ಸ್ಥಳೀಯ ಜಗದ್ಗುರು ಕೊಟ್ಟೂರು ಸಂಸ್ಥಾನ ಮಠದ ಮರಿ ಕೊಟ್ಟೂರು ಸ್ವಾಮೀಜಿ ಹೇಳಿದರು.
ತುಂಗಭದ್ರಾ ಫೋಟೋ ಮತ್ತು ವಿಡಿಯೋಗ್ರರ‍್ಸ್ ಅಸೋಸಿಯೇಷನ್‌ನಿಂದ ನಗರದ ಚರ್ಚð ಹಾಲ್‌ನಲ್ಲಿ ಗುರುವಾರ ಗುರುವಾರ ಆಯೋಜಿಸಲಾಗಿದ್ದ 186ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಛಾಯಾಗ್ರಹಣ ಎಂಬುದು ಒಂದು ಸುಂದರ ಪ್ರಪಂಚ. ಬದುಕು ಕಟ್ಟಿಕೊಳ್ಳುವ ಕೆಲಸವನ್ನು ಛಾಯಾಗ್ರಾಹಕರು ಮಾಡಬೇಕು. ಹಿಂದಿನ ಕಾಲದ ಕಪ್ಪು ಬಿಳುಪು ಫೊಟೋಗಳಿಗೆ ಒಂದು ಬೆಲೆ ಇತ್ತು. ನಂತರ ದಿನದಲ್ಲಿ ಆಧೂನೀಕರಣದ ಭಾಗವಾಗಿ ಕ್ಯಾಮೆರಾ ಜಾಗದಲ್ಲಿ ಮೊಬೈಲ್‌ಗಳು ಬಂದು ಕುಳಿತವು. ಈ ಮೊಬೈಲ್ ಕ್ರಾಂತಿಯಿAದಾಗಿ ಮನುಕುಲ ಅಳಿವಿನತ್ತ ಸಾಗುತ್ತಿದೆ. ಮುನುಷ್ಯರಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿ, ಯಾಂತ್ರಿಕತೆ ನೆಲೆಸಿದೆ. ಮನುಷ್ಯರಿಗಿಂತ ನಾವು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ಕುಟುಂಬ ವ್ಯವಸ್ಥೆ ಹಳ್ಳ ಹಿಡಿದಿದೆ ಎಂದರು.
ಇಳಕಲ್‌ನ ಜನಾಬ್ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಆಧುನೀಕರಣದ ಫಲವಾಗಿ ಛಾಯಾಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಹಾಗೂ ಸಮಾಜ ಮಾಡಬೇಕಾಗಿದೆ ಎಂದರು.
ಪವಿತ್ರ ಹೃದಯ ದೇವಾಲಯದ ಫಾದರ್ ಭಗವಂತರಾಜ್, ಡಿವೈಎಸ್ಪಿ ಡಾ.ಟಿ.ಮಂಜುನಾಥ, ಕಾರ್ಮಿಕ ಇಲಾಖೆ ಅಧಿಕಾರಿ ಸೂರ್ಯಪ್ಪ ಐ.ಡೊಂಬರ ಮತ್ತೂರ, ಅಂಚೆ ಇಲಾಖೆ ಅಧಿಕಾರಿ ಬಿ.ರಾಜಪ್ಪ, ಅಸೋಸಿಯೇಷನ್ ಗೌರವಾಧ್ಯಕ್ಷ ತೈಯಬ್ ಹುಸೇನ್, ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನ ಗೌಡ, ಪ್ರಮುಖರಾದ ಮಾರುತಿ, ಸÀಂಜಯ್ ಕುಮಾರ್, ಸಂದೀಪ್ ನಾಯ್ಡು ಇತರರಿದ್ದರು.