ಬಿಸಿಲಿನ ತಾಪಕ್ಕೆ ಬಸವಳಿದ ಜನ

20 MANJU 02
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0004,0.0000; brp_del_sen:0.1300,0.0000; motionR: 0; delta:1; bokeh:1; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 151.5153;aec_lux_index: 0;albedo: ;confidence: ;motionLevel: -1;weatherinfo: null;temperature: 38;
Published on

ಹೊಸಪೇಟೆ: ಬೇಸಿಗೆಯ ತಾಪಕ್ಕೆ ಜನ ಕಂಗಾಲಾಗಿದ್ದಾರೆ. ಮಧ್ಯೆ ಮಧ್ಯೆ ಒಂದಷ್ಟು ಮಳೆಯ ಸಿಂಚನವಾಗುತ್ತಿದ್ದರೂ, ಬಿಸಿಲಿನ ಪ್ರತಾಪವೇನೂ ಕಡಿಮೆಯಾಗಿಲ್ಲ. ಒಂದು ದಿನ ಕೆಲ ತಾಸು ಮೋಡ ಹರಿದಾಡಿ, ಕೆಲ ತಾಸು ಮಳೆ ಸುರಿದು ಹೋದರೂ ಮಾರನೇ ದಿನವೇ ಮತ್ತದೇ ಪ್ರಕರ ಬಿಸಿಲು ಇರುತ್ತದೆ. ಕೆಲಸ, ಕಾರ್ಯಗಳ ನಿಮಿತ್ತ ಮನೆಯಿಂದ ಆಚೆ ಹೋದವರು ಅಡಿಅಡಿಗೂ ಸಿಗುವ ಎಳನೀರು, ಮಜ್ಜಿಗೆ, ಷರಬತ್ ಹಾಗೂ ಹಣ್ಣಿನ ಜ್ಯೂಸ್‌ಗಳ ಮೊರೆ ಹೋಗುವ, ನೆರಳು ಕಂಡಲ್ಲಿ ನಿಂತು ವಿರಮಿಸಿಕೊಳ್ಳುವ ಮೂಲಕ ಬಿಸಿಲಿನ ಧಗೆಯಿಂದ ಪಾರಾಗುವ ಪ್ರಯತ್ನದಲ್ಲಿದ್ದಾರೆ.

ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 9 ಗಂಟೆಯಿAದಲೇ ಸೂರ್ಯನ ಪ್ರತಾಪ ಆರಂಭವಾಗುತ್ತದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದು, ಪಟ್ಟಣದ ರಸ್ತೆಗಳಲ್ಲಿ ಜನರ ಓಡಾಟ ತುಸು ಕಡಿಮೆಯಾಗಿದೆ. ದೈನಂದಿನ ಕೆಲಸ–ಕಾರ್ಯಗಳನ್ನು ಬಿಟ್ಟರೆ, ತೀರಾ ಅಗತ್ಯ ಕೆಲಸಗಳಿಗೆ ಮಾತ್ರ ಜನ ಮನೆಯಿಂದ ಹೊರಬೀಳುತ್ತಾರೆ. ಏಪ್ರಿಲ್ ಆರಂಭದಲ್ಲಿಯೇ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬAದಿದ್ದು, ಈಗಲೂ ಮಧ್ಯೆ ಮಧ್ಯೆ ಮಳೆಯಾಗುವುದು ಬಿಟ್ಟರೆ ಬಿಸಿಲಿನ ಪ್ರಮಾಣವೇನೂ ಕಡಿಮೆಯಾಗಿಲ್ಲ.

module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (200, 2);aec_lux: 182.02373;aec_lux_index: 0;albedo: ;confidence: ;motionLevel: 0;weatherinfo: null;temperature: 40;
module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (200, 2);aec_lux: 182.02373;aec_lux_index: 0;albedo: ;confidence: ;motionLevel: 0;weatherinfo: null;temperature: 40;

ಮಧ್ಯಾಹ್ನದ ವೇಳೆಗೆ 38 ರಿಂದ 40 ಡಿಗ್ರಿವರೆಗೂ ಬಿಸಿಲಿನ ತಾಪಮಾನ ಏರುವುದರಿಂದ ಮಧ್ಯಾಹ್ನವಂತೂ ನಗರದ ಹೃದಯ ಭಾಗವಾದ ಮೇನ್ ಬಜಾರ್, ಮದಕರಿ ವೃತ್ತ, ಕಾಲೇಜು ರಸ್ತ, ಡಾ.ಪುನಿತ್ ರಾಜಕುಮಾರ ವೃತ್ತ ಸೇರಿದಂತೆ ಜನದಟ್ಟಣೆ ಪ್ರದೇಶಗಳು ಸಹ ಜನರಿಲ್ಲದೆ ಭಣಗುಡುತ್ತಿವೆ. ಸುತ್ತಮುತ್ತಲಿನ ಗ್ರಾಮಗಳ ವ್ಯಾಪಾರ ವಹಿವಾಟುಗಳಿಗೆ ಕೇಂದ್ರ ಭಾಗವಾಗಿರುವ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಲಿ, ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಮರಿಯಮ್ಮನಹಳ್ಳಿ, ಕಮಲಾಪುರ ಪಟ್ಟಣಕ್ಕೆ ಗ್ರಾಮೀಣ ಭಾಗದ ಜನರು ಬರದೇ ವ್ಯಾಪಾರ ವಹಿವಾಟು ಇಳಿಕೆ ಕಂಡಿದೆ. ಕಿರಾಣಿ, ಜವಳಿ, ಬಟ್ಟೆ, ಬಂಗಾರದ ಅಂಗಡಿಗಳಲ್ಲಿ ವ್ಯಾಪಾರಸ್ಥರು ಗ್ರಾಹಕರ ಬರುವಿಕೆಗೆ ಕಾಯುವಂತಾಗಿದೆ. ಆದರೆ ಎಳನೀರು, ಜ್ಯೂಸ್, ತಂಪು ಪಾನೀಯ ವ್ಯಾಪಾರದಲ್ಲಿ ಮಾತ್ರ ಹೆಚ್ಚಳವಾಗಿದೆ. ಗ್ರಾಹಕರ ಸಂಖ್ಯೆಯೂ ಹೆಚ್ಚಿದ್ದು, ದರ ಕೂಡ ದುಪ್ಪಟ್ಟಾಗಿದೆ. ಒಂದು ಎಳನೀರಿನ ಬೆಲೆ 35 ರಿಂದ 50 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಬೆಲೆಯು ಒಂದು ಪ್ಲೇಟ್‌ಗೆ 20 ರೂಪಾಯಿ ಇದೆ, ಆದರೂ ತೆಗೆದುಕೊಳ್ಳುವರೇನೂ ಕಡಿಮೆಯಾಗಿಲ್ಲ. ಇನ್ನು ಮಜ್ಜಿಗೆ, ಷರಬತ್, ಕಬ್ಬಿನ ಹಾಲು, ಹಣ್ಣಿನ ರಸಗಳ ಬೆಲೆಯೂ ಕೂಡಾ 40 ರಿಂದ 70 ರೂಪಾಯಿಗೆ ಮಾರಾಟವಾಗುತ್ತಿವೆ.

ಮಣ್ಣಿನ ಮಡಿಕೆಗೂ ಬೇಡಿಕೆ

ಬಡವರ ಫ್ರಿಡ್ಜ್ ಎಂದು ಕರೆಯಲ್ಪಡುವ ಮಣ್ಣಿನ ಮಡಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ರಾಜಸ್ಥಾನಿ ಮಣ್ಣಿನ ಮಡಿಕೆಗಳಿಗೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಷ್ಟು ದಿನ ಒಂದೇ ಆಕಾರದಲ್ಲಿ ದೊರೆಯುತ್ತಿದ್ದ ಮಡಿಕೆಗಳು ಈಗ ಆಧುನಿಕ ಸ್ಪರ್ಶದಿಂದ ವಿವಿಧ ಬಗೆಯ ಬಣ್ಣ ಹೊದ್ದುಕೊಂಡು ಚಿತ್ತಾಕರ್ಷವಾಗಿ ಗಮನ ಸೆಳೆಯುತ್ತಿವೆ. ಬಣ್ಣ ಬಣ್ಣದ ಚಿತ್ತಾಕರ್ಷಕವಾದ ಮಣ್ಣಿನ ಮಡಿಕೆಗಳು ದಾರಿಹೋಕರನ್ನು ಕೈಬೀಸಿ ಕರೆಯುತ್ತಿವೆ. ಸಾಧಾರಣ ಮಡಿಕೆಗಳು 250 ರಿಂದ 500 ರೂ. ರಾಜಸ್ಥಾನ ಮಡಿಕೆಗಳು 400 ರಿಂದ 600 ರೂ. ವರೆಗೆ ಮಾರಾಟವಾಗುತ್ತಿವೆ. ದಿನನಿತ್ಯ 10 ರಿಂದ 15 ಮಡಿಕೆಗಳು ಮಾರಾಟವಾಗುತ್ತಿವೆ ಎಂದು ಮಡಿಕೆ ವ್ಯಾಪಾರಸ್ಥರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net