

ಹೊಸಪೇಟೆ: ಸರ್ಕಾರ, ಇಲಾಖೆಯ ಧೋರಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದಿಂದ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಎರಡನೇ ದಿನಕ್ಕೆ ಮುಂದುವರೆಯಿತು.
ಕೆಎಸ್‌ಪಿಡಿಒ ಜಿಲ್ಲಾ ಅಧ್ಯಕ್ಷ ಚಂದ್ರನಾಯ್ಕ್ ಮಾತನಾಡಿ ಒಕ್ಕೂದಿಂದÀ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅ.4ರಿಂದ ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಪ್ರತಿಭಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಆದರೆ ಇದುವರೆಗೂ ನಮ್ಮ ಬೇಡಿಕೆಗಳಿಗೆ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲಾ ಆದರಿಂದ ಪ್ರತಿಭಟನೆಯನ್ನು ರಾಜ್ಯದ್ಯಾಂತ ಏಕಕಾಲದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಂದೆ ಮುಂದುವರೆಸಲು ರಾಜ್ಯ ಒಕ್ಕೂಟದ ನಿರ್ಧರಿಸಿದೆ ಎಂದು ತಿಳಿಸಿದರು.
ಪ್ರತಿಭಟನೆ ಹಿನ್ನೆಲೆ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಸೇರಿ ಮೂಲಸೌಕರ್ಯಗಳು ಹೊರತುಪಡಿಸಿ ಇತರೇ ಯಾವುದೇ ಕೆಲಸ ನಡೆಯುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ರಾಜ್ಯದ ಶೇ.70ರಷ್ಟು ಜನರಿಗೆ ವಿವಿಧ ಸೇವೆಗಳನ್ನು ನೀಡಿರುವ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ಸಮಸ್ತ ಅಧಿಕಾರಿಗಳು ನೌಕರರು ಆಡಳಿತ ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಲಾಗಿದೆ. ಆದರೂ, ಇಲಾಖೆಯಾಗಲಿ ಸರ್ಕಾರವಾಗಲಿ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿವೆ ಎಂದು ಆಗ್ರಹಿಸಿದರು.
ಕೆಎಸ್‌ಪಿಡಿಒ ಉಪಧ್ಯಕ್ಷ ಎಚ್.ಕವಿತಾ, ಆರ್‌ಡಿಪಿಆರ್ ಸಂಘದ ತಾಲೂಕು ಅಧ್ಯಕ್ಷ ಟಿ.ಇ ಉಮೇಶ್, ಪ್ರಮುಖರಾದ ಶ್ರೀಧರ, ಉಮೇಶ್ ಜಾಗರ‍್ದಾರ್, ಶಂಬುಲಿAಗನಗೌಡ, ಲಿಂಗಪ್ಪ ಮಾಗಳದ, ಭರತ್ ಕುಮಾರ್, ಪುಷ್ಪಲತಾ ಇತರರಿದ್ದರು.