

ಹೊಸಪೇಟೆ: ತಾಲೂಕಿನ ಕಮಲಾಪೂರ ಪುರಸಭೆಯ ಪೌರ ನೌಕರರ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಕೆ.ಹರೀಶ ನೇಮಕರಾಗಿದ್ದಾರೆ.
ಕಮಲಾಪೂರ ಪ.ಪಂ. ಕಚೇರಿಯಲ್ಲಿ ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕೆ.ಹರೀಶ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಿಂಕದರ್ ಅವರನ್ನು ಆಯ್ಕೆ ಮಾಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಓಬಣ್ಣ, ಕಂದಾಯ ಅಧಿಕಾರಿಗಳಾದ ವಿರೂಪಾಕ್ಷಪ್ಪ ಪತ್ತಾರ, ರಾಮಪ್ಪ, ಪ್ರಮುಖರಾದ ರವಿಕುಮಾರ್, ವರ್ಮಾ, ಸುರೇಶಬಾಬು ಇತರರಿದ್ದರು.