

ಹೊಸಪೇಟೆ: ಒತ್ತಡದ ಬದುಕಿನಲ್ಲಿ ಕ್ರೀಡೆಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಭಾನುವಾರ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿAದ ಹಮ್ಮಿಕೊಂಡಿದ್ದ ಸೌರ್ಹಾದ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಒತ್ತಡದ ಬದುಕಿನಲ್ಲಿ ಕ್ರೀಡೆಗಳ ಮಹತ್ವವನ್ನು ಕಳೆದುಕೊಳ್ಳುವ ವಾತರಣ ಹೆಚ್ಚಾಗಿದೆ. ಕ್ರೀಡೆಗಳನ್ನು ಆಡುವುದರಿಂದ ಆರೋಗ್ಯ ಸದೃಢವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರದಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿ ಒತ್ತಡಗಳು ಹೆಚ್ಚಾಗಿವೆ. ಇಂತಹ ದಿನಮಾನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಾವಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಕೆಲಸ ಒತ್ತಡದಲ್ಲಿ ಬಿಡುವು ಮಾಡಿಕೊಂಡು ಕ್ರೀಡೆ ಆಯೋಜನೆ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು.
ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ ಎರಡನ್ನ ಸಮನಾಗಿ ಸ್ವೀಕರಿಸಬೇಕು, ಆಟವನ್ನ ಮನೊರಂಜನೆಯಾಗಿ ತೆಗೆದುಕೊಂಡಾಗ ಹೆಚ್ಚಿನ ಆಸಕ್ತಿ ಬರುತ್ತದೆ. ಪತ್ರಕರ್ತರು ಮತ್ತು ಪೊಲೀಸರು ಒಂದೇ ಮುಖದ ಎರಡು ನಾಣ್ಯಗಳು ಇದ್ದಂತೆ ಇಬ್ಬರು ಕೂಡ ಸಮಾಜ ಬದಲಾವಣೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ ಎಂದರು.
ಸAಘದಿAದ ಪತ್ರಕರ್ತರ ಹಂಪಿ ವಾರಿಯರ್ಸ್ ಮತ್ತೊಂದು ವಿಜಯನಗರ ಕಿಂಗ್ಸ್ ತಂಡ ಎರಡು ತಂಡಗಳಾಗಿ ಮಾಡಲಾಯಿತು. ಮೊದಲ ಟಾಸ್ ಗೆದ್ದ ಹಂಪಿ ವಾರಿಯರ್ಸ್ ಪಿಲ್ಡಿಂಗ್‌ನ್ನು ಆಯ್ಕೆ ಮಾಡಿಕೊಂಡಿತು. ವಿಜಯನಗರ ಕಿಂಗ್ಸ್ ಬ್ಯಾಟಿಂಗ್ ಆಡುವ ಮೂಲಕ ನಿಗದಿತ 10 ಒವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತು. ಈ ತಂಡದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಆಟವಾಡಿದರು. ಹಂಪಿ ವಾರಿಯರ್ಸ್ ತಂಡ ನಿಗದಿತ 10 ಒವರ್‌ನಲ್ಲಿ 2 ವಿಕೇಟ್ ನಷ್ಟಕ್ಕೆ 62 ರನ್ ಗಳಿಸಿತು. 9 ರನ್ ಗಳಿಂದ ಸೋಲು ಅನುಭವಿಸಬೇಕಾಯಿತು. ಈ ತಂಡದಲ್ಲಿ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಆಟ ಆಡುವು ಮೂಲಕ ಗಮನ ಸೆಳೆದರು.
ಡಿವೈಎಸ್ಪಿ ಟಿ.ಮಂಜುನಾಥ, ಪಿಐಗಳಾದ ಹುಲುಗಪ್ಪ, ಗುರುರಾಜ್ ಕಟ್ಟಿಮನಿ, ಪತ್ರಕರ್ತರಾದ ಮನೋಹರ್, ಪಿ.ಸತ್ಯಾನಾರಾಯಣ, ಕೆ.ಲಕ್ಷ್ಮಣ, ಪಿ.ವೆಂಕೋಬ ನಾಯಕ, ಅನಂತ ಜೋಶಿ, ಎಂ.ಜಿ ಬಾಲಕೃಷ್ಣ, ಬಿ.ಕುಮಾರಸ್ವಾಮಿ, ವೆಂಕಟೇಶ್, ರೇಖಪ್ರಕಾಶ, ಕವಾಸ್ ಇತರರಿದ್ದರು.