

ಹೊಸಪೇಟೆ: ಜಲ ಜೀವನ್ ಮಿಷನ್ ಯೋಜನೆಯಲ್ಲಿ ನಡೆದ ಕಾಮಗಾರಿ ಕಳಪೆಯಾಗಿದ್ದು, ತಾಲೂಕಿನ ತಾಳೆಬಸಾಪುರ ತಾಂಡಾದಲ್ಲಿ ಕುಡಿವ ನೀರಿಗಾಗಿ ಪಡಲಾರದ ಕಷ್ಟಗಳಿಲ್ಲಾ, ಬೆಳಗ್ಗೆ ಹೊಲ ಗದ್ದೆಗಳಿಗೆ ಹೋಗೋದು ಬಿಟ್ಟು ನೀರಿಗಾಗಿ ಕಾಯೋ ಪರಿಸ್ಥಿತಿ ಎದುರಾಗಿದೆ.
ತುಂಗಭದ್ರಾ ಹರಿದು ಹೋಗುವ ನಾಡಿನಲ್ಲಿರೋ ಈ ತಾಂಡಾದ ಜನರು ಕುಡಿವ ನೀರಿನ ಪರಿಸ್ಥಿತಿ ದುಸ್ತರವಾಗಿದೆ. ಇನ್ನೂ ದೂರವಿರೋ ಗ್ರಾಮಗಳ ಜನರ ಪರಿಸ್ಥಿತಿ ಏನಾಗಬಹುದೆಂಬುದು ಯೋಚನೆ ಮಾಡಿದರೆ, ದೇವರ ಪ್ರೀತಿ ಅನ್ನೋದು ಅಂಬೋಣವಾಗಿದೆ. ಇನ್ನೂ ತಾಂಡಾದ ವ್ಯಪ್ತಿಯಲ್ಲಿ 14 ಕೊಳವೆ ಬಾವಿಗಳಿವೆ. ಆದರೂ, ಇಲ್ಲಿ ಮಹಿಳೆಯರು ಒಂದು ಕೊಡ ನೀರು ತುಂಬಲು ಸತಿಸಾಲಿನಲ್ಲಿ ನಿಂತು ಅರ್ದ ದಿನ ಕಾಯುವ ಅನಿವಾರ್ಯವಾಗಿದೆ. ಇದಕ್ಕೆ ಕಾರಣ ಜೆಜೆಎಂ ಯೋಜನೆಯಲ್ಲಿ ಕಳಪೆ ಕಾಮಗಾರಿಯಾಗಿ ಇದ್ದ ಕೊಳವೆಬಾವಿಯಿಂದ ಸರಬರಾಜು ಆಗುವ ನೀರು ಕೂಡ ಇಲ್ಲ. ಎಲ್ಲಿ ಬೇಕಲ್ಲಿ ಪೈಪ್‌ಲೈನ್ ಹೊಡೆಯಲಾಗಿದೆ. ಹೊಸ ಪೈಪ್‌ಲೈನ್ ಕಳಪೆಆಗಿ ಸೋರಿಕೆಯಾಗುತ್ತಿದೆ. ಇದರಿಂದ ನೀರಿಗಾಗಿ ಪರಿತಪಿಸುವ ಮಹಿಳೆಯರು, ನಮಗೆ ನೀರು ಸರಿಯಾಗಿ ಬಿಡ್ತಿಲ್ಲಾ ಅಂತ ಗೋಳಾಡ್ತಿರೋ ತಾಯಂದಿರು ಗ್ರಾಪಂ ಆಡಳಿತಕ್ಕೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ತಾಳೆಬಸಾಪುರ ತಾಂಡಾದಲ್ಲಿ 3 ವಾರ್ಡ್ಗಳಿದ್ದು, ಸುಮಾರು 800 ಕ್ಕೂ ಹೆಚ್ಚು ಮನೆಗಳಿವೆ. 8 ಜನ ಗ್ರಾಪಂ ಸದಸ್ಯರಿದ್ದಾರೆ. ಹೊಸಪೇಟೆ ತಾಲೂಕಿನ ತಾಂಡಾಗಳಲ್ಲಿಯೇ ಅತೀ ದೊಡ್ಡ ತಾಂಡಾ ಇದಾಗಿದೆ. ಮೂರು ವಾರ್ಡ್ಗಳ ಪೈಕಿ ಎರಡು ವಾರ್ಡ್ಗಳಲ್ಲಿ ಅಲ್ಪ ಸ್ವಲ್ಪ ನೀರು ಬರುತ್ತಿದ್ದು, ಬಳಕೆಗೆ ಆಗಲ್ಲ. ಆದರೆ ಒಂದನೇ ವಾರ್ಡ್ನಲ್ಲಿ, ನೀರಿಗಾಗಿಯೇ ಬದುಕಬೇಕೆಂಬ ಪರಿಸ್ಥಿತಿ ಇದೆ. ನಮಗೆ ಕುಡಿವ ನೀರಿನ ಬವಣೆ ಹೆಚ್ಚಿದೆ. ಪರಿಹಾರ ಮಾಡಿ ಅಂತ ಜನ ಒತ್ತಾಯಿಸಿದ್ದಾರೆ.
ತಾಳೆಬಸಾಪುರ ತಾಂಡಾದಲ್ಲಿ ನೀರಿನ ಸಮಸ್ಯೆ ಆಗಿರಲಿಲ್ಲ. ಜೆಜೆಂ ಯೋಜನೆಯಿಂದ ಹಳೆ ಪೈಪ್‌ಲೈನ್ ಎಲ್ಲ ಹೊಡೆದು ಹೊಗಿವೆ. ಜೆಜೆಎಂ ಯೋಜನೆಯ ಕಾಮಗಾರಿ ಕಳಪೆಯಿಂದ ನೀರು ಸರಬರಾಜಿನಲ್ಲಿ ಸಮಸ್ಯೆಯಾಗಿದೆ. ಆದಷ್ಟು ಬೇಗ ಪರಿಹರಿಸಲಾಗುತ್ತದೆ. - ಟಿ.ಕೆ.ವೀರಪ್ಪ, ಪಿಡಿಒ, ಚಲಕನಹಟ್ಟಿ ಗ್ರಾಮಪಂಚಾಯಿತಿ, ಹೊಸಪೇಟೆ ತಾಳೆಬಸಾಪುರ ತಾಂಡಾದಲ್ಲಿ ಜೆಜೆಎಂ ಯೋಜನೆ ಸಂಪೂರ್ಣ ಕಳಪೆಯಾಗಿದೆ. ಇದ್ದ ನೀರಿನ ವ್ಯವಸ್ಥೆ ಕೂಡ ಹಾಳಾಗಿದೆ. ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದರೆ ನಿರ್ಲಕ್ಷ ತೋರುತ್ತಿದ್ದಾರೆ. - ಶಂಕರ್‌ನಾಯ್ಕ, ತಾಳೆಬಸಾಪುರ ತಾಂಡಾ ಸದಸ್ಯ ಕಳೆದ ಮೂರು ತಿಂಗಳಿAದ ಕುಡಿವ ನೀರಿಗಾಗಿ ಅಲೆದಾಡುತ್ತಿದ್ದೆವೆ. ಕೆಲಸ ಬಿಟ್ಟು ನೀರಿಗಾಗಿ ಬೆಳಗ್ಗೆ ಸಂಜೆ ಕಾಯುವ ಅನಿವಾರ್ಯವಾಗಿದೆ. ವೋಟ್ ಹಾಕಿದ ಸದಸ್ಯರು ಇಲ್ಲಿನ ಸಮಸ್ಯೆ ಪರಿಹರಿಸುತ್ತಿಲ್ಲ. ನಮ್ಮ ಹೋಳು ಯಾರ ಹತ್ತಿರ ಹೋಗಬೇಕು ಗೊತ್ತಾಗುತ್ತಿಲ್ಲ. - ಲಕ್ಷಿö್ಮÃಬಾಯಿ, ತಾಳೆಬಸಾಪುರ ತಾಂಡಾ, ಹೊಸಪೇಟೆ