ಕನ್ನಡ ವಿವಿಯಿಂದ ಹೊರಗುತ್ತಿಗೆ ರದ್ದು ವಾಪಾಸ್

14 MANJU 05
Published on

ಹೊಸಪೇಟೆ: ಈ ಹಿಂದೆ ಕನ್ನಡ ವಿವಿಗೆ ಅನುದಾನದ ಕೊರತೆ ಹಿನ್ನೆಲೆ ಗುತ್ತಿಗೆ ಸಿಬ್ಬಂದಿಗಳನ್ನು ಕೈ ಬಿಡುವ ತಿರ್ಮಾನ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಹಿಂಪಡೆಯಲಾಗಿದೆ.

ಕನ್ನಡ ವಿವಿ ತೀವ್ರ ಅನುದಾನದ ಕೊರತೆ ಎದುರಿಸುತ್ತಿದೆ. ಆರ್ಥಿಕ ಸ್ಥಿತಿಯನ್ನು ನಿಗಿಸಲು ಕಳೆದ ವಿವಿ ಸಿಂಡಿಕೇಟ್ ಸಭೆಯಲ್ಲಿ 47 ಹೊರಗುತ್ತಿಗೆ ಸಿಬ್ಬಂದಿಗಳನ್ನು ಕೈ ಬಿಡುವ ತಿರ್ಮಾನವಾಗಿತ್ತು. ಇದರಿಂದ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹಲವರಿಗೆ ಕೆಲಸ ಹೋಗುತ್ತದೆ ಎಂಬ ಆತಂಕ ಶುರುವಾಗಿತ್ತು. ಅಕ್ಟೋಬರ್ ಕೊನೆ ತಿಂಗಳು ಎಂದಿದ್ದರು. ಅ.09ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ವಿವಿಯಿಂದ ಹೊರಗುತ್ತಿಗೆ ರದ್ದು ಎಂಬ ಶೀಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತು. ವರದಿ ನೋಡಿ ಸಂಘಟನೆಗಳಿAದ ವಿವಿಯಲ್ಲಿ ಪ್ರತಿಭಟನೆ, ಮನವಿಗಳನ್ನು ನೀಡಲಾಗಿತ್ತು. ಶಾಸಕರು ಹಾಗೂ ಇತರೆ ಜನ ಪ್ರತಿನಿಧಿಗಳಿಂದ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ ಬೆನ್ನೆಲೆ ವಿವಿಯಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಗುತ್ತಿಗೆ ನೌಕರರನ್ನು ಕೆಲಸಕ್ಕೆ ವರೆಸುವ ತಿರ್ಮಾನವಾಗಿದೆ.

ಸಿಎಂ ಬಳಿ ನೀಯೋಗ

ಸರ್ಕಾರದಿಂದ ನಿರ್ಲಕ್ಷö್ಯದಿಂದ ಕನ್ನಡ ವಿವಿಯಲ್ಲಿ ಅನುದಾನದ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಗುತ್ತಿಗೆ ನೌಕರರನ್ನು ಕೈ ಬಿಡಲಾಗಿತ್ತು. ಗುರುವಾರ ನಡೆದ ಸಭೆಯಲ್ಲಿ ಶಾಸಕರ ಒತ್ತಡಕ್ಕೆ ಗುತ್ತಿಗೆ ನೌಕರರಿಗೆ ಮುಂದೆ ವರೆಸುವ ತಿರ್ಮಾನ ಸಿಂಡಿಕೇಟ್ ತಗೆದುಕೊಂಡಿದೆ. ವಿವಿಯ ಅನುದಾನಕ್ಕಾಗಿ ಶಾಸಕ ಎಚ್.ಆರ್.ಗವಿಯಪ್ಪ ನೇತೃತ್ವದಲ್ಲಿ ಸಿಂಡಿಕೇಟ್ ಸದಸ್ಯರ ನಿಯೋಗ ಸಿಎಂ ಬಳಿ ಹೋಗಿ ಅನುದಾನ ತರುವ ತಿರ್ಮಾನ ಮಾಡಲಾಗಿದೆ.

ವಿವಿಗೆ ಅನುದಾನ ಕೊರತೆಯಿಂದ ಸಿಂಡಿಕೇಟ್‌ನಲ್ಲಿ ಕೈ ಬಿಡುವ ತಿರ್ಮಾನ ಆಗಿತ್ತು. ಮತ್ತೆ ಶಾಸಕರು ಸೇರಿ ಇತರರಿಂದ ಮುಂದು ವರೆಸುವ ಒತ್ತಡ ಬಂದಿದೆ. ಶಾಸಕರು ಅನುದಾನಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸುತ್ತೆವೆ ಎಂದು ಭರವಸೆ ಮೇಲೆ ಮತ್ತೆ ಸಭೆಯಲ್ಲಿ ಗುತ್ತಿಗೆ ನೌಕರರನ್ನು ಮುಂದು ವರೆಸುವ ತಿರ್ಮಾನ ಸಭೆಯಲ್ಲಿ ಆಗಿದೆ. - ಡಾ.ಪರಮಶಿವಮೂರ್ತಿ, ಕನ್ನಡ ವಿವಿ ಕುಲಪತಿ ವಿವಿಯಲ್ಲಿ ನಡೆದ ಸಭೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗೆ ಕೈ ಬಿಡುವ ತಿರ್ಮಾನ ಹಿಂಪಡೆಯಲಾಯಿತು. ಅನುದಾನಕ್ಕಾಗಿ ಶಾಸಕರು ಹಾಗೂ ಸಿಂಡಿಕೇಟ್ ಸದಸ್ಯರ ನೇತೃತ್ವದಲ್ಲಿ ಸಿಎಂ ಬಳಿ ನಿಯೋಗ ಹೋಗುವ ತಿರ್ಮಾನ ಆಗಿದೆ. - ಬಣ್ಣದ ಮನೆ ಸೋಮಶೇಖರ್, ಸಿಂಡಿಕೇಟ್ ಸದಸ್ಯ, ಕನ್ನಡ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net