ಶ್ರಮಜೀವಿಗಳ ಬೆವರಿನ ಭಾರತ ಗೆಲ್ಲಲಿ

23 MANJU 03
Published on

ಹೊಸಪೇಟೆ : ದೇಶವನ್ನು ಕಳೆದ 77 ವರ್ಷಗಳಲ್ಲಿ ಶ್ರಮ ಜೀವಿಗಳ ಶ್ರಮದಿಂದ ಕಟ್ಟಿದ್ದೇವೆ ವಿನಃ ಯಾವುದೇ ಧಾರ್ಮಿಕ ಅಂಧಾನುಕರಣೆಯಿAದಲ್ಲ ಎಂಬುದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಕ.ವಿ.ವಿ. ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಹೇಳಿದರು.

ದಲಿತ ಹಕ್ಕುಗಳ ಸಮಿತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲರಿಗೂ ಅಕ್ಷರ ಜ್ಞಾನ ನೀಡಿದ್ದು, ನಮ್ಮ ದೇಶದ ಸಂವಿಧಾನವೇ ಹೊರತು, ಯಾವುದೇ ಧರ್ಮ, ದೇವಾನು ದೇವತೆಗಳ ಅನುಗ್ರಹದಿಂದಲ್ಲ. ನಾವು ನಮ್ಮ ದೇಶದ ಸಂವಿಧಾನವನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಳ್ಳದೇ ಇರುವುದರಿಂದ, ಎರಡು ಸಾವಿರ ವರ್ಷಗಳಿಂದ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೆ ಮುಂದುವರೆದಿವೆ. ಭಾರತೀಯ ಸಂಪ್ರದಾಯದಲ್ಲಿ ದೇವರ ಲೇಪಿತ ಧರ್ಮವಾಗಿದ್ದು, ಮೌಢ್ಯಕ್ಕೆ ಕಾರಣವಾಗಿದೆ. ಮೌಡ್ಯ ಸಂಪ್ರದಾಯಗಳ ತೀರ್ಥದ ಭಾರತ ಪ್ರಸ್ತುತ ಗೆಲ್ಲುತ್ತಿದೆ. ಇದನ್ನು ಬದಲಾಯಿಸಬೇಕಾಗಿದೆ. ಇಂತಹ ಅನ್ಯಾಯದ ವ್ಯವಸ್ಥೆಯನ್ನು ಕಿತ್ತೊಗೆಯ ಬೇಕಾಗಿದೆ. ಇದಕ್ಕಾಗಿಯೇ ನಾವು ಶಿಕ್ಷಣ ಪಡೆಯಬೇಕಾಗಿದೆ. ಸೈದ್ದಾಂತಿಕ ಹೋರಾಟ ಕಟ್ಟಬೇಕಾಗಿದೆ. ಇದು ನಮ್ಮ ಕರ್ತವ್ಯವಾಗಿದ್ದು, ಸಂವಿಧಾನದ ಆಶಯವಾಗಿದೆ ಎಂದರು.

ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ವಿರುಪಾಕ್ಷ ಪೂಜಾರಳ್ಳಿ ಮಾತನಾಡಿ, ಅನಿಷ್ಠ ಶೋಷಣೆಗಳ ವಿರುದ್ದ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲೂ ಸಹ ಹೋರಾಟ ನಡೆಸಿ, ಕೋಟ್ಯಾಂತರ ಹೋರಾಟಗಾರರಿಗೆ ಸ್ಪೂರ್ತಿಯಾಗಿರುವ ಪರಿಯರ್ ಮರೆಯದ ಪ್ರೇರಕ ಶಕ್ತಿಯಾಗಿದ್ದಾರೆಂದು ಹೇಳಿದರು. ಪ್ರಮುಖರಾದ ಮರಡಿ ಜಂಬಯ್ಯನಾಯಕ, ಬಿ.ತಾಯಪ್ಪ ನಾಯಕ, ಬಿ.ರಮೇಶ್ ಕುಮಾರ್, ಎಂ.ಧನರಾಜ್, ಸೂರ್ಯನಾರಾಯಣ, ಎಚ್.ಡಿ.ಚಂದ್ರಪ್ಪ, ಎಂ.ಗೋಪಾಲ್, ನಾಗರಾಜ್ ಪತ್ತಾರ್, ಬಿ.ಮಹೇಶ್, ನಾಗುನಾಯ್ಕ್, ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net