

ಹೊಸಪೇಟೆ: ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಮತ್ತು ವ್ಯವಹಾರಿಕವಾಗಿ ರಾಯಚೂರು ಪರಿಸರದ ಕನ್ನಡದ ಮೇಲೆ ಉರ್ದುವಿನ ಪ್ರಭಾವವಿದೆ ಎಂದು ಕನ್ನಡ ವಿವಿ ಸಂಶೋಧನಾರ್ಥಿ ಶ್ರೀದೇವಿ ಹೇಳಿದರು.
ಕನ್ನಡ ವಿವಿ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಇತ್ತೀಚೆಗೆ ಆನ್‌ಲೈನ್ ವಾರದಮಾತು ಕಾರ್ಯಕ್ರಮದಲ್ಲಿ ರಾಯಚೂರು ಪರಿಸರದಲ್ಲಿ ಕನ್ನಡ ಭಾಷೆಯೊಂದಿಗೆ ಉರ್ದು ಭಾಷಾ ಬಳಕೆ ವಿಷಯದ ಕುರಿತು ಮಾತನಾಡಿದರು. ರಾಯಚೂರು ಪ್ರದೇಶದಲ್ಲಿ ಬಹುಸಂಖ್ಯಾತರ ಭಾಷೆ ಕನ್ನಡವಾಗಿತ್ತು. ನಿಜಾಮರು ಉರ್ದು ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸಿ ಉರ್ದು ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿದ್ದರು. ಇದರ ಪರಿಣಾಮದಿಂದ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ಉರ್ದುವಿನ ಒಡನಾಟವನ್ನು ಮುಖ್ಯವಾಗಿ ಮಧ್ಯಮವರ್ಗ, ಕೆಳವರ್ಗದ ವ್ಯಕ್ತಿನಾಮಗಳಲ್ಲಿ, ಬೈಗುಳಗಳಲ್ಲಿ, ಸಂಖ್ಯಾವಾಚಕಗಳು ಮತ್ತು ಪರಿಮಾಣವಾಚಕಗಳಲ್ಲಿ ಕನ್ನಡ-ಉರ್ದು ಭಾಷಿಕ ಬಳಕೆಯನ್ನು ಗುರುತಿಸಬಹುಕು ಎಂದು ಹೇಳಿದರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥ ಡಾ.ಪಿ.ಮಹದೇವಯ್ಯ, ಸಂಶೋಧನಾರ್ಥಿಗಳಾದ ಎಚ್.ವಿ. ಶಿಲ್ಪಾ, ಸಿ.ಚೌಡಪ್ಪ, ಅಂಬಿಕಾ ಇತರರಿದ್ದರು.