ಹೊಸಪೇಟೆಯಲ್ಲಿ ಸರಳ ಓಣಂ ಆಚರಣೆ

20 MANJU 05
Published on

ಹೊಸಪೇಟೆ: ಕೈರಾಳಿ ಕಲ್ಚರಲ್ ಅಸೋಷೇಶನ್‌ನಿಂದ ನಗರದ ವಿ.ಎನ್.ರಾಯಲ್ ಪೌಂಕ್ಷನ್ ಹಾಲ್‌ನಲ್ಲಿ ಸೆ.22 ರಂದು ಸರಳವಾಗಿ ಓಣಂ ಹಬ್ಬವನ್ನು ಆಚರಿಸಲಾಗುವುದು ಎಂದು ಅಸೋಷೇಶನ್ ಕಾರ್ಯದರ್ಶಿ ಪಿ.ಸುಂದರA ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಕೇರಳದ ವೈನಾಡ್‌ನಲ್ಲಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬ ವರ್ಗಕ್ಕೆ ಪರಿಹಾರ ನೀಡುವ ಹಿನ್ನೆಲೆಯಲ್ಲಿ ಈ ಬಾರಿ ಓಣಂ ಹಬ್ಬವನ್ನು ಆಚರಿಸಲಾಗುವುದು ಎಂದರು.

ಕೇರಳದಿಂದ ಆಗಮಿಸಿ, ಕಳೆದ 40 ವರ್ಷಗಳಿಂದ ವಿಜಯನಗರ ಜಿಲ್ಲೆಯಲ್ಲಿ ನೆಲಸಿರುವ ಕೇರಳಿಗರು ಎಲ್ಲಾ ಜಾತಿ ಜನಾಂಗದವರೊAದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯನ್ನು ಮಾಡುತ್ತಿರುವ ಕೇರಳಿಗರು, ಸ್ನೇಹ ಜೀವಿಗಳಾಗಿ ಎಲ್ಲರೊಂದಿಗೆ ಬೆರೆತು ಹೊಂದಾಗುತ್ತಾರೆ. ಕೇರಳದಿಂದ ವಲಸೆ ಬಂದ ಸುಮಾರು 1500 ಕ್ಕೂ ಜನರು ಜಿಲ್ಲೆಯಲ್ಲಿದ್ದಾರೆ. ಕಳೆದ 2000 ಇಸವಿಯಲ್ಲಿ ಕೈರಳಿ ಕಲ್ಚರಲ್ ಅಸೋಷೇಶನ್ ಸ್ಥಾಪನೆಯಾಯಿತು. ಕಳೆದ 24 ವರ್ಷಗಳಿಂದಲೂ ಓಣ ಹಬ್ಬವನ್ನು ಆಚರಿಸಲಾಗುತ್ತಿದೆ.

ಈ ಬಾರಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು ಎಂದ ಅವರು, ಕೇರಳದ ವೈನಾಡ್‌ನಲ್ಲಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬ ವರ್ಗಕ್ಕೆ 2 ಲಕ್ಷ ರೂ. ಪರಿಹಾರವನ್ನು ಕೇರಳ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಪದಾಧಿಕಾರಿಗಳಾದ ಎಂ.ಕೆ.ಮತಾಯಿ, ಸಲ್ವಿಜಾರ್ಜ್, ದೇವದಾಸ್, ಎಸ್.ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net