

ಹೊಸಪೇಟೆ: ಓಬವ್ವಳ ಅಗಾದ ದೈರ್ಯ, ಶಕ್ತಿ ಮತ್ತು ಪ್ರತಿಕೂಲತೆಯಲ್ಲಿ ಹೋರಾಟ ಮಾಡುವ ಶಕ್ತಿ ನಮ್ಮ ರಾಜ್ಯದ ಮಹಿಳೆಯರಲ್ಲಿ ಮೂಡಲಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಛಲವಾದಿ ಕೇರಿಯಲ್ಲಿ ಸೋಮವಾರ ನಡೆದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ವೀರವನಿತೆ ಒನಕೆ ಓಬವ್ವ ನಮ್ಮ ಇತಿಹಾಸದಲ್ಲಿ ಅಸಾಧಾರಣ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿ ನೆನಪಾಗುವ ಮಹಾನ್ ಮಹಿಳೆ. ಚಿತ್ರದುರ್ಗ ಕೋಟೆಯನ್ನು ಅಲವಾರು ರಾಜ ಮನೆತನಗಳು ಆಳಿದರು, ಪಾಳೆಗಾರರು ಚಿತ್ರದುರ್ಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ಓಬವ್ವ ಯಾವುದೇ ಹುದ್ದೆಯಲ್ಲಿ ಇಲ್ಲದಿದ್ದರು ತಮ್ಮ ದೈರ್ಯ, ಸಹಸದಿಂದ ರಾಜ್ಯಕ್ಕೆ ಮಾದರಿಯಾಗಿದ್ದಾಳೆ. ಓಬವ್ವನ ಗುಣಗಳಾದ ಧೈರ್ಯ, ಆತ್ಮವಿಶ್ವಾಸ, ಪ್ರತಿಕೂಲತೆಯಲ್ಲಿ ಹೋರಾಟ ಮಾಡುವ ಶಕ್ತಿ ಮತ್ತು ಪರಿವಾರ ಮತ್ತು ಸಮಾಜದ ರಕ್ಷಣಾ ಬಾಧ್ಯತೆಯ ಗುಣಗಳನ್ನು ಮಹಿಳೆಯರು ರೂಪಿಸಿಕೊಳ್ಳಬೇಕು ಎಂದರು.
ಎಸ್ಪಿ ಬಿ.ಎಲ್.ಶ್ರೀಹರಿ ಬಾಬು ಮಾತನಾಡಿ, ನಾವು ವೀರವನಿತೆಯ ವೀರ ಘಾತೆಯನ್ನು ಕೇಳುತ್ತಾ ಬೇಳೆದವರು. ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವ ನೂರಾರು ಶತ್ರು ಸೈನಿಕರನ್ನು ಒನಕೆಯಲ್ಲೇ ಬಡಿದು ಹಾಕಿಳು. ಓಬವ್ವ ಇಂದಿಗೂ ನಮ್ಮ ಮನಗಳಲ್ಲಿ ಮರೆಯಲಾಗದ ಮಾಣಿಕ್ಯವಾಗಿದ್ದಾರೆ ಎಂದರು.