ಯುವ ಪೀಳಿಗೆ ನಾಳಿನ ಆಶಾಭಾವ

05 MANJU 04
Published on

ಹೊಸಪೇಟೆ: ಪರಿಸರ ದಿನಾಚರಣೆ ನಿಮಿತ್ತ ಇಲ್ಲಿನ ಶಂಕರ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜು, ಶ್ರೀ ಕೃಷ್ಣದೇವರಾಯ ವಿವಿಯ ಸಹಯೋಗದಲ್ಲಿ ನಗರದ ಚಿತ್ತವಾಡಗಿಯ ವಿನೋಬಾವೆ ಸÀರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿಯನ್ನು ನೆಡುವುದರ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಪರಿಸರವಾದಿ ಪಂಪಯ್ಯ ಸ್ವಾಮಿ ಮಳಿಮಠ ಉದ್ಘಾಟಿಸಿದರು.

ನಂತರ ಮಾತನಾಡಿ, ಪ್ರತಿಯೊಬ್ಬ ಶಿಬಿರಾರ್ಥಿಯು ಒಂದೊAದು ವನಕ್ಕೆ ಸಮ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಒಂದು ಕಾಡನ್ನೇ ಸೃಷ್ಟಿಸಬಹುದು, ಹಾಗೆಯೇ ಪ್ಲಾಸ್ಟಿಕ್‌ನ ಬಳಕೆಯನ್ನು ಮಿತಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವವನ್ನು ಮತ್ತು ಪಕ್ಷಿಗಳನ್ನು ವೀಕ್ಷಿಸುವ ಹವ್ಯಾಸ ಮಾಡಿಕೊಳ್ಳಬೇಕು ಎಂದರು.

ಪ್ರಭಾರ ಬಿಇಒ ಶೇಖರಪ್ಪ ಹೊರಪೇಟೆ, ಶಿಬಿರದಿಕಾರಿ ಡಾ.ಟಿ.ರಘುಪ್ರಸಾದ್, ಪ್ರಾಂಶುಪಾಲ ಎನ್.ಜಿ.ಹೆಬಸೂರ್, ಮುಖ್ಯಶಿಕ್ಷಕ ಎಸ್.ಬಸವರಾಜ್, ಎಸ್‌ಎಂಸಿ ಪದಾಧಿಕಾರಿ ಜಿ.ಬಾಬು, ಸಂತೋಷ್, ಪ್ರಾಧ್ಯಾಪಕರಾದ ಡಾ.ಕನ್ನಕಟ್ಟಿ ಜಯಣ್ಣ, ದೇವಣ್ಣ, ಡಾ.ಟಿ.ವೀರಭದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net