ಪತ್ರಿಕೆ ಎನ್ನುವುದು ಸೃಜನಶೀಲಾ ಕಲೆ

23 MANJU 04
Published on

ಹೊಸಪೇಟೆ: ಪತ್ರಿಕೆಗಳನ್ನು ಭವಿಷ್ಯದ ಕನ್ನಡಿ ಮತ್ತು ಸಮಾಜದ ಕನ್ನಡಿ ಎಂದು ಕರೆಯುತ್ತಾರೆ. ಇಂತಹ ಪತ್ರಿಕೆಗಳಲ್ಲಿ ಕೌಶಲ್ಯ, ಸೃಜನಶೀಲತೆಯನ್ನು ಹೆಚ್ಚಾಗಿ ಬೆಳಸಿಕೊಂಡವರು ಬೆಳವಣಿಯನ್ನು ಹೊಂದುವುದರ ಜತೆಗೆ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವರು ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

ಪತ್ರಿಕಾ ದಿನಾಚರಣೆಯ ನಿಮಿತ್ತ ಕನ್ನಡ ವಿವಿಯ ನುಡಿ ಕಟ್ಟಡದಲ್ಲಿ ಇತ್ತೀಚೆಗೆ ಮಾಸಪತ್ರಿಕೆಗಳ ಕಾರ್ಯನಿರ್ವಹಣೆ ಮತ್ತು ವೈಶಿಷ್ಟ÷್ಯತೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಮಾಣ ಪತ್ರದ ಜತೆಗೆ ಕಲಿಕೆಯು ಬಹಳ ಮುಖ್ಯವಾಗುತ್ತದೆ. ಹೊಸ ಆಲೋಚನೆ ಹಾಗೂ ಹೊಸ ದೃಷ್ಟಿಕೋನವನ್ನು ಪತ್ರಿಕಾ ರಂಗದಲ್ಲಿ ಬೆಳೆಸಿಕೊಳ್ಳಬೇಕು. ಇವತ್ತಿನ ದಿನ ಪತ್ರಿಕೆಗಳು ನಾಳೆಗೆ ರದ್ದಿ ಎಂಬAತೆ ಪತ್ರಿಕೆಯು ವಿಶಿಷ್ಟವಾದ ಸುದ್ದಿಯನ್ನು ಓದುಗರಿಗೆ ನೀಡತಕ್ಕದ್ದು. ಆದರೆ ಇತ್ತೀಚಿನ ದಿನ ಪತ್ರಿಕೆಗಳಲ್ಲಿ ಕೇವಲ ರಾಜಕೀಯ ಕೇಂದ್ರಿತ ಸುದ್ದಿಗಳಿಗೆ ಹೆಚ್ಚಾಗಿ ಒತ್ತು ನೀಡುತ್ತಿದ್ದು, ಆರಂಭದ ದಿನಗಳ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ನೀಡುವ ಒತ್ತು ಇಂದು ಕಾಣುತ್ತಿಲ್ಲ. ಒಂದೇ ಸುದ್ದಿಯನ್ನು ಎಲ್ಲಾ ಪತ್ರಿಕೆಗಳು ವರ್ಗಾಯಿಸಿಕೊಳ್ಳುವುದರಿಂದ ಪತ್ರಿಕೆಗಳು ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಆದರೇ, ಮಾಸ ಪತ್ರಿಕೆಗಳು ಒಂದು ವಿಶಿಷ್ಟವಾದ ಮಾಹಿತಿಯ ಜೊತೆಗೆ ಸಾಹಿತ್ಯ, ಸಂಸ್ಕöÈತಿ, ಸಂದರ್ಶನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ. ಯುವ ಜನತೆಯ ಮೇಲೆ ಸಮಾಜ ಚಿಂತನೆಗಳನ್ನು ಬೀರಿದ್ದು, ಓದುಗರ ಗಮನವನ್ನು ಸೆಳೆಯುತ್ತಿವೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಡಾ.ಎಸ್.ವೈ.ಸೋಮಶೇಖರ್, ಅಕ್ಷರ ಸಂಗಾತ ಮಾಸ ಪತ್ರಿಕೆಯ ಸಂಪಾದಕ ಡಾ.ಟಿ.ಎಸ್.ಗೊರವರ ರಾಜೂರ, ಅಧ್ಯಾಪಕರಾದ ಡಾ.ಎಸ್.ಕೆ.ಲೋಕೇಶ, ಕೆ.ಪದ್ಮಾವತಿ, ಕೆ.ರೂಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net