

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಸೇರಿದಂತೆ ಜಿಲ್ಲಾದ್ಯಾಂತ ಜನರು ಹೊಸ ವರ್ಷ 2025ನ್ನು ಅದ್ದೂರಿಯಾಗಿ ಸ್ವಾಗತಿಸಿ ಸಂಭ್ರಮದಿAದ ಆಚರಿಸಿದರು.
ಮಂಗಳವಾರ ರಾತ್ರಿ 12 ಗಂಟೆಯಾಗುತ್ತಲೇ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜನರು ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಕಾಲೇಜು ರಸ್ತೆ, ಹಂಪಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಯುವಕರು ಪಟಾಕಿ ಹೊಡೆದು, ಕುಣಿದು ಕುಪ್ಪಳಿಸಿದರು. ಮೋಜು ಮಸ್ತಿಯ ಪಾರ್ಟಿಗಳಲ್ಲಿ ತೊಡಗಿದ್ದರು. ಪಾನಪ್ರಿಯರ ಹೊಸ ವರ್ಷದ ಸಂಭ್ರಮಕ್ಕಾಗಿ ಮದ್ಯದ ಅಂಗಡಿಗಳ ಎದುರು ಕಿಕ್ಕಿರಿದು ನಿಂತ ದೃಶ್ಯ ಕಂಡು ಬಂತು.
ಬುಧವಾರ ಬೆಳಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಹಾಕಿ ಸಿಹಿ ಹಂಚುವ ಮೂಲಕ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಮಿಂದೆದ್ದರು. ಪರಿಚಯಸ್ಥರು, ಸಂಬAಧಿಕರು, ಸ್ನೇಹಿತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸರ್ಕಾರ ಕಚೇರಿಗಳಲ್ಲಿ ನಾನಾ ಕಡೆ ಅಧಿಕಾರಿಗಳು ಸಿಬ್ಬಂದಿಗಳೊAದಿಗೆ ಸೇರಿ ಕೇಕ್ ಕತ್ತರಿಸಿ ಹೊಸ ವರ್ಷಾಚರಿಸಿದರು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಭ್ರಮ ಮನೆ ಮಾಡಿತ್ತು. ವಿದ್ಯಾರ್ಥಿಗಳು ಹೊಸ ಬಟ್ಟೆ, ಅದರಲ್ಲೂ ವಿದ್ಯಾರ್ಥಿನಿಯರು ಸೀರೆಯುಟ್ಟು ಸಂಭ್ರಮಿಸಿದರು.
ವರ್ಷದ ಮೊದಲ ದಿನದ ನಿಮಿತ್ತ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲಕ್ಕೆ 10 ಗಂಟೆಗೆಲ್ಲ 15 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದರು. ಸರತಿ ಸಾಲಿನಲ್ಲಿ ಸ್ವಾಮಿಯ ದರ್ಶನ ಪಡೆದರು. ಇನ್ನೂ ಕೊದಂಡರಾಮ ದೇಗುಲ, ಯಂತ್ರೋಧಾರಕ, ಉದ್ದನವೀರಭದ್ರ ದೇಗುಲ, ಹತ್ತು ಕೈಯಮ್ಮ, ಪಟ್ಟಣದಯಲ್ಲಮ್ಮ ದೇಗುಲ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ವಿಜಯವಿಠಲ ದೇಗುಲ, ಉಗ್ರನರಸಿಂಹ, ಕಮಲ್‌ಮಹಲ್ ಇತರೆ ಪ್ರಮುಖ ಸ್ಮಾರಕಗಳ ಬಳಿ ಪ್ರವಾಸಿರು ತುಂಬಿಕೊAಡಿದ್ದರು. ಹಂಪಿ ಜೂ, ಕರಡಿಧಾಮ, ತುಂಗಭದ್ರಾ ಜಲಾಶಯ ಹಾಗೂ ಹಿನ್ನೀರು ಪ್ರದೇಶ ಸೇರಿದಂತೆ ವಿವಿದೇಡೆ ಪ್ರವಾಸಿ ತಾಣಗಳಲ್ಲಿ ಯುವಜನ ಹಾಗೂ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದರು.
ವಿಶ್ವವಿಖ್ಯಾತ ಹಂಪಿಯ ಮಾತಂಗ ಪರ್ವತ, ಹೇಮಕೂಟ, ಮಹಾನವಮಿ ದಿಬ್ಬ, ಮಾಲ್ಯವಂತ ದೇಗುಲ ಸೇರಿದಂತೆ ವಿವಿಧ ಕಡೆಯಲ್ಲಿ ದೇಶ-ವಿದೇಶಿ ಪ್ರವಾಸಿಗರು ಬುಧವಾರ ಬೆಳಗ್ಗೆ ನೂತನ ವರ್ಷದ ಮೊದಲ ಸೂರ್ಯೊದಯ ವೀಕ್ಷಿಸಿ ಸಂಭ್ರಮಿಸಿದರು.