ನೇಪಳದಲ್ಲಿ ಸಿಲುಕಿದ ಹೊಸಪೇಟೆಯ 12 ಜನ

Published on

ಹೊಸಪೇಟೆ: ಇಲ್ಲಿನ ಎಂ,ಪಿ.ಪ್ರಕಾಶ್ ನಗರದ ಒಂದೇ ಕುಟುಂಬದ 12 ಜನ ನೇಪಾಳದಲ್ಲಿ ಸಿಲುಕಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.

ಎಂಪಿ ಪ್ರಕಾಶ್ ನಗರದ ಒಂದೇ ಕುಟುಂಬದ ಗಿರೀಶ್, ರೇಖಾ, ಲೀನಿಸ್, ನಿತಾಶ, ರೇಖಾ, ಪುರುಷೋತ್ತಮ, ಸುಮ, ರೂಪ, ರಾಹುಲ್, ಗೀತಾಂಜಲಿ ಹಾಗೂ ನಗರದ ರಾಣಿಪೇಟೆಯ ಪ್ರದೀಪ್ ಮತ್ತು ಮಲ್ಲಿಕಾರ್ಜುನ್ ಎಂಬುವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಗಿರೀಶ್ ಎಂಬುವರು ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಕಾರ್ಖಾನೆಯೊಂದರಲ್ಲಿ ನೌಕರನಾಗಿದ್ದು, ಕುಟುಂಬ ಹಾಗೂ ತೋರಣಗಲ್ಲಿನ ಸ್ನೇಹಿತರೊಂದಿಗೆ ಒಟ್ಟು 22 ಜನ ಸೆ.06ರಂದು ನೇಪಾಳ ಪ್ರವಾಸ ಹಮ್ಮಿಕೊಂಡಿದ್ದಾರೆ. ಕಣ್ಮಂಡುಗೆ ಹೋಗಿರೋ ಈ ತಂಡ ಅಲ್ಲಿನ ಪರಿಸ್ಥಿತಿ ಗಲಾಟೆ ಹಿನ್ನೆಲೆಯಲ್ಲಿ ಹೊಟೇಲ್‌ವೊಂದರಲ್ಲಿಯೇ ಉಳಿದುಕೊಂಡಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ, ಯಾವುದೇ ಸಮಸ್ಯೆ ಇಲ್ಲ. ಮಿಲಿಟರಿ ಸಹಾಯ ಪಡೆದು ತೆರಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net