

ಹೊಸಪೇಟೆ: ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಕಾಲುವೆಯ ತಡೆಗೋಡೆ ಬಿರುಕು ಬಿಟ್ಟಿ, ದೊಡ್ಡ ಕಂದಕವೇ ನರ‍್ಮಾಣವಾಗಿದೆ. ಈ ಭಾಗದಲ್ಲಿ ಸಂಚಾರ ಸಂಪರ‍್ಣ ಬಂದ್‌ಆಗಿದೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾಲುಕಿನ ನಾಗೇನಹಳ್ಳಿ ಬಳಿ 9.4 ಕಿ.ಮೀ ಬಳಿ ತುಂಗಭದ್ರಾ ಜಲಾಶಯದ ತಡೆಗೋಡೆ ಬಿರುಕು ಬಿಟ್ಟಿದೆ. ಇದರಿಂದ ದೊಡ್ಡ ಕಂದಕವೇ ನರ‍್ಮಾಣವಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ಗ್ರಾಮ ಹಾಗೂ ಹೊಲ-ಗದ್ದೆಗಳಿಗೆ ರಸ್ತೆ ಸಂಚಾರ ಸಂಪರ‍್ಣ ಬಂದ್ ಆಗಿದೆ.
ಕಳೆದ 2022ರಲ್ಲಿ ತುಂಗಭದ್ರಾ ಮಂಡಳಿ ಕಾಲುವೆ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡಾಗ, ಬಲ ಭಾಗದಲ್ಲಿ ಮಾತ್ರ ತಡೆಗೋಡೆ ನರ‍್ಮಾಣ ಮಾಡಿ ಮಳೆ ನೀರಿನಿಂದ ಕಾಲುವೆಯ ದಡಕ್ಕೆ ಯಾವುದೇರೀತಿ ಹಾನಿ ಮಾಡದಂತೆ ಕಾಮಗಾರಿ ನಡೆಸಿದೆ. ಆದರೆ ಎಡ ಭಾಗದಲ್ಲಿತಡೆಗೋಡೆ ನರ‍್ಮಾಣ ಮಾಡದೆ ನರ‍್ಲಕ್ಷö್ಯ ತಾಳಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಈ ಭಾಗದ ರೈತರು ಆರೋಪಿಸುತ್ತಾರೆ.
ಎಲ್‌ಎಲ್‌ಸಿ ಕಾಲುವೆಯ 9.4 ಕಿ.ಮೀ ಬಳಿ ಎಡ ಭಾಗದಲ್ಲಿ ತಡೆಗೋಡೆ ನರ‍್ಮಾಣ ಮಾಡುವಂತೆ ತುಂಗಭದ್ರಾ ಮಂಡಳಿ ಅಧಿಕಾರಿಗಳಿಗೆ ನಾಗೇನಹಳ್ಳಿ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಮಂಡಳಿ ಮಾಡಿದ ಎಡವಟ್ಟಿನಿಂದ ಇದೀಗ ಕಾಲುವೆ ದಡದಲ್ಲಿ ದೊಡ ಬಿರುಕು ಬಿದ್ದಿದ್ದು, ಭೂಮಿ ಬಾಯಿ ತೆರೆದಿದೆ. ಈ ಭಾಗದ ರಸ್ತೆಯಲ್ಲಿ ರೈತರು ಹಗಲು ರಾತ್ರಿ ಸಂಚರಿಸುತ್ತಿದ್ದು, ರಾತ್ರಿ ವೇಳೆ ಕಂದಕಕ್ಕೆ ಬಿದ್ದರೆ ಪ್ರಾಣ ಹಾನಿಯಾಗುವ ಸಂಭವವಿದೆ. ಇದರಿಂದ ತುಂಗಭದ್ರಾ ಮಂಡಳಿ ಅಧಿಕಾರಿಗಳು, ಕಾಲುವೆ ದಡದ ಮೇಲೆ ಬಿರುಕು ಬಿಟ್ಟಿರುವ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಬೇಕು. ಕೊನೆಯ ಪಕ್ಷತಾತ್ಕಾಲಿಕವಾಗಿ ಆದರೂ ದುರಸ್ತಿಗೊಳಿಸಿ, ಸರ‍್ವಜನಿಕರ ಪ್ರಾಣವನ್ನು ಉಳಿಸಬೇಕು ಎಂದು ನಾಗೇನಹಳ್ಳಿ ರೈತರು ಆಗ್ರಹಿಸಿದ್ದಾರೆ.
ಕಳೆದ ಮೇ.18 ರಂದು ಸುರಿದ ಮಳೆಯಿಂದ ನಾಗೇನಹಳ್ಳಿ ಗ್ರಾಮದ ಕೆರೆಯ ಕಟ್ಟೆಯ ಎಡ ಭಾಗದಲ್ಲಿ ಕಾಲುವೆ ದಡ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟು ಭೂಮಿ ಬಾಯಿ ತೆರೆದಿದೆ. ಈ ರಸ್ತೆಯಲ್ಲಿ ರೈತರ ಎತ್ತು ಬಂಡಿಗಳು, ಟ್ರಾö್ಯಕ್ಟರ್‌ಗಳು ಒಡಾಡುತ್ತವೆ. ಹೀಗಾಗಿ ಬೆಳಿಗ್ಗೆಯಿಂದ ಸ್ಥಳದಲ್ಲಿದ್ದು, ನಾವು ಸರ‍್ವಜನಿಕರಿಗೆ ಎಚ್ಚರ ನೀಡುತ್ತಿದ್ದೇವೆ. ಟಿ.ಬಿ.ಬರ‍್ಡ್ ಮಂಡಳಿ ತಕ್ಷಣವೇ ದುರಸ್ತಿಗೊಳಿಸಿ, ಅಪಾಯವನ್ನು ತಪ್ಪಿಸಬೇಕು ಎಂದು ನಾಗೇನಹಳ್ಳಿ ಗ್ರಾಮದ ರೈತ ಮುಖಂಡ ದೇವರಮನಿ ರವಿಶಂಕರ್ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಭಾನುವಾರ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಜರುಗಿ ಮರ‍್ನಾಲ್ಕು ದಿನಗಳಾದರೂ ತುಂಗಭದ್ರಾ ಮಂಡಳಿ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ದುರಸ್ತಿ ಮಾಡದಿರುವುದನ್ನು ತೀವ್ರವಾಗಿ ಖಂಡಿಸಿದರು. ಶೀಘ್ರವೇ ಬಿರುಕು ಬಿಟ್ಟಿರುವ ಕಾಲುವೆಯ ತಡೆಗೋಡೆ ನರ‍್ಮಿಸಬೇಕು. ರಸ್ತೆ ದುರಸ್ತಿಗೊಳಿಸಿ ರೈತರ ಸಂಚಾರಕ್ಕೆ ಅನುವು ಮಾಡಿಕೊಡದೆ ಹೋದರೆ ತುಂಗಭದ್ರಾ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತುಂಗಭದ್ರಾ ಜಲಾಶಯದ ಎಲ್.ಎಲ್.ಸಿ ಕಾಲುವೆಯ ತಡೆಗೋಡೆ ಕುಸಿದು, ರಸ್ತೆಯಲ್ಲಿ ದೊಡ್ಡ ಕಂದಕವೇ ಬಿದ್ದಿದೆ, ರಾತ್ರಿ ವೇಳೆ ಈರಸ್ತೆಯಲ್ಲಿ ಸಂಚರಿಸುವವರು ಕಂದಕಕ್ಕೆ ಬಿದ್ದರೆ ಪ್ರಾಣ ಹೋಗುವುದು ಗ್ಯಾರಂಟಿ. ತುಂಗಭದ್ರಾ ಮಂಡಳಿ ಅಧಿಕಾರಿಗಳು ರೈತರ ಜೀವದೊಂದಿಗೆ ಚೆಲ್ಲಾಟವಾಡದೆ ಶೀಘ್ರವೇ ತಡೆಗೋಡೆ ಮತ್ತು ರಸ್ತೆ ನರ‍್ಮಾಣಕ್ಕೆ ಮುಂದಾಗಬೇಕು ಇಲ್ಲದಿದ್ದರೆ ತುಂಗಭದ್ರಾ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಸಿ.ಎ..ಗಾಳೆಪ್ಪ, ಜಿಲ್ಲಾಧ್ಯಕ್ಷ, ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ, ಹೊಸಪೇಟೆ