ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

07 MANJU 07
Published on

ಹೊಸಪೇಟೆ: ನಗರದ ರಾಣಿಪೇಟೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶರನ್ನವರಾತ್ರೋತ್ಸವ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು.

ಲೋಕಕಲ್ಯಾಣರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರೀನಿವಾಸ ಕಲ್ಯಾಣೋತ್ಸವ ನಿಮಿತ್ತ ಬೆಳಿಗ್ಗೆ ವಿಶೇಷವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ ಕ್ಕೆ ಅಭಿಷೇಕ, ರಜತ, ರೇಷ್ಮೆ ಅಲಂಕಾರ ಮಾಡಲಾಗಿತ್ತು. ನಂತರ ಕನಕಾಭಿಷೇಕ, ಸರ್ವಸೇವಾ, ಮಹಾಪೂಜೆ, ಅರ್ಚನೆ, ಹಸ್ತೋದಕ, ನೇವೈದ್ಯ ನೆರವೇರಿಸಲಾಯಿತು. ಸಂಜೆ ಶ್ರೀಮಠದ ಆವರಣದಲ್ಲಿ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರ ಮೂರ್ತಿಗಳನ್ನು ಭಜನೆ ಕೀರ್ತನೆಗಳೊಂದಿಗೆ ವೇದಿಕೆಗೆ ಕರೆತರಲಾಯಿತು. ಬಳಿಕ ಶಾಸ್ತ್ರೋಕ್ತವಾಗಿ ಕಲ್ಯಾಣೋತ್ಸವ ನೆರವೇರಿಸಲಾಯಿತು.

ಮಂತ್ರಾಲಯ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಭಜನಾ ಮಂಡಳಿ ಸದಸ್ಯರು ನೃತ್ಯ ಗೀತೆ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ಚಿಕ್ಕ ಮಕ್ಕಳಿಂದ ಕೋಲಾಟ ನೃತ್ಯ ಪ್ರದರ್ಶನ ನಡೆಯಿತು. ಶ್ರೀಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಅರ್ಚಕ ಮಾರುತಿ ಆಚಾರ್, ಮಂತ್ರಾಲಯ ಗುರುಸಾರ್ವಭೌನ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ, ಪ್ರಮುಖರಾದ ಗುರುರಾಜ ಶೀರೆಕೊಳ, ಗುರುರಾಜ ಕುಲಕರ್ಣಿ, ವಿಜಯಕುಮಾರ್, ಗೋವಿಂದ ಶೆಟ್ಟಿ, ರಾಘವೇಂದ್ರ, ಕೃಷ್ಣಮೂರ್ತಿ ಇತರರಿದ್ದರು. ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಶ್ರೀಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಅರ್ಚಕ ಮಾರುತಿ ಆಚಾರ್, ಮಂತ್ರಾಲಯ ಗುರುಸಾರ್ವಭೌನ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net